

ಆಲ್ದೂರು: ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಶಿಕ್ಷಕರಾದ
ಹೀನಾ ತಬಸುಮ್ ಹಾಗೂ ರಜಿಯಾ ಸುಲ್ತಾನ್ ತಮ್ಮ ಸ್ವಂತ 2.50 ಲಕ್ಷ ರೂ. ವೆಚ್ಚದಲ್ಲಿ
ಕೊಳವೆ ಬಾವಿ ಕೊರೆಸಿಕೊಡುವ ಮೂಲಕ ಶಾಲೆಯ ನೀರಿನ ಸಮಸ್ಯೆಗೆ ಮುಕ್ತಿ
ನೀಡಿದ್ದಾರೆ.
ಆಲ್ದೂರು ಸಮೀಪದ ಮಾಚಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ
ಒಂದರಿಂದ ಏಳನೇ ತರಗತಿವರೆಗೆ ಒಟ್ಟು 250 ಜನ ವಿದ್ಯಾರ್ಥಿಗಳಿದ್ದಾರೆ. ಈ ಶಾಲೆಗೆ
ಗ್ರಾಪಂನಿಂದ ಮೂರು ದಿನಗಳಿಗೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿತ್ತು.
ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಶಿಕ್ಷಕರು, ವಿದ್ಯಾರ್ಥಿಗಳು, ಅಡುಗೆ ಸಿಬ್ಬಂದಿ
ಬಿಸಿಯೂಟ ,ಶೌಚಗೃಹಕ್ಕೂ ನೀರಿಲ್ಲದೆ ತೊಂದರೆ ಅನುಭವಿಸುವಂತಾಗಿತ್ತು. ಇದನ್ನು
ಮನಗಂಡ ಶಾಲೆ ಶಿಕ್ಷಕಿಯರಾದ ಹೀನಾ ತಬಸುಮ್, ರಜಿಯಾ ಸುಲ್ತಾನ ಶಾಲೆಗೆ
ತಮ್ಮ ಸ್ವಂತ ಖರ್ಚಿನಲ್ಲಿ ಕೊಳವೆಬಾವಿ ಕೊರೆಸಿ ಶಾಲೆಯ ನೀರಿನ ಸಮಸ್ಯೆ
ನೀಗಿಸಿದ್ದಾರೆ.