

ಕಟಕೋಳ: ಸಮೀಪದ ಚಂದರಗಿಯ ಎಸ್‌ಎಂ ಕಲೂತಿ ಸಂಯುಕ್ತ ಕ್ರೀಡಾ ವಸತಿ ಸಿಬಿಎಸ್‌ಸಿ ಪ್ರೌಢಶಾಲೆಯಲ್ಲಿ ಬೆಂಗಳೂರಿನ ಸಿಬಿಎಸ್‌ಸಿ ಕೇಂದ್ರದ ಅಡಿಯಲ್ಲಿ ಈಚೆಗೆ ಐದು ದಿನಗಳ ಶಿಕ್ಷಕರ ತರಬೇತಿ ಕಾರ್ಯಾಗಾರ ಜರುಗಿತು.
ಮೊದಲ ದಿನ ಬಾಗಲಕೋಟೆಯ ಅಮೃತ ಸಿಬಿಎಸ್‌ಸಿ ಶಾಲೆಯ ಪ್ರಾಚಾರ್ಯ ರವೀಂದ್ರ ಅವರು ಶಿಕ್ಷಕ ವೃತ್ತಿಪರತೆಯ ಕುರಿತು ತರಬೇತಿ ನೀಡಿದರು. ಎರಡನೆಯ ದಿನ ಬೋಧನೆಯಲ್ಲಿ ಕಲೆಯ ಪಾತ್ರದ ಕುರಿತು ಕಲಬುರಗಿಯ ರೇಣುಕಾ ೌಂಡೇಷನ್ ಶಾಲೆಯ ಪ್ರಾಚಾರ್ಯೆ ಕಲ್ಪನಾ ನಗರ ಅವರು ತರಬೇತಿ ನೀಡಿದರು. ಮೂರನೆಯ ದಿನ ಬೈಲಹೊಂಗಲದ ಪ್ರೇರಣಾ ಶಾಲೆಯ ಪ್ರಾಚಾರ್ಯೆ ಸುಜಾತ ಹಿರೇಮಠ ಅವರು ಅನುಭವದೊಂದಿಗೆ ಕಲಿಕೆ ವಿಷಯ ಕುರಿತು ತರಬೇತಿ ನೀಡಿದರು.
ಬ್ಲೂಮ್ಸ್ ಟೆಕ್ಸ್‌ಟನಮಿ ಮತ್ತು ಮೌಲ್ಯಮಾಪನ ವಿಷಯ ಕುರಿತು ಪ್ರಾಚಾರ್ಯ ಪಾಂಡುರಂಗ ಪಾಟೀಲ ಅವರು ನಾಲ್ಕನೆಯ ದಿನ ತರಬೇತಿ ನೀಡಿದರು. ಐದನೆಯ ದಿನ ಕ್ಲಾಸ್ ರೂಮ್ ಮ್ಯಾನೇಜ್ಮೆಂಟ್ ವಿಷಯದ ಕುರಿತು ಬೈಲಹೊಂಗಲದ ಪ್ರೇರಣ ಶಾಲೆಯ ಪ್ರಾಚಾರ್ಯೆ ಸುಜಾತ ಹಿರೇಮಠ ಅವರು ಶಿಕ್ಷಕರಿಗೆ ತರಗತಿಯ ನಿರ್ವಹಣೆ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.
ಸಿಬಿಎಸ್‌ಇ ಹಾಗೂ ಕನ್ನಡ ಮಾಧ್ಯಮದ ಶಿಕ್ಷಕರು ಭಾಗವಹಿಸಿದ್ದರು. ಎಸ್‌ಎಂ ಕಲೂತಿ ಸಿಬಿಎಸ್‌ಸಿ ಪ್ರೌಢಶಾಲೆ ಚಂದರಗಿ ಪ್ರಾಚಾರ್ಯ ಪಾಂಡುರಂಗ ಪಾಟೀಲ ಹಾಗೂ ಕನ್ನಡ ಮಾಧ್ಯಮ ಪ್ರಾಚಾರ್ಯ ಪಿ.ಎಲ್. ಘಾಗನೆ ಉಪಸ್ಥಿತರಿದ್ದರು.