ಶಿಕ್ಷಕರು ವಿದ್ಯಾರ್ಥಿ ಸ್ನೇಹ ಬೋಧನೆ ರೂಢಿಸಿಕೊಳ್ಳಲಿ

FotoJet (2)
Published on

ರಾಜಯೋಗಿ ಡಾ.ಪಿ.ಎಚ್​.ಮಹೇಂದ್ರಪ್ಪ ಹೇಳಿಕೆ |

ಶಿರಾ: ವಿದ್ಯಾರ್ಥಿಗಳಲ್ಲಿ ಅಡಗಿರುವ ಸೂಕ್ತ ಶಕ್ತಿಗಳನ್ನು ಪ್ರೇರಣೆ ಮತ್ತು ಮಾರ್ಗದರ್ಶನದ ಮೂಲಕ ಪುನಶ್ಚೇತಗೊಳಿಸ ಬೇಕು ಎಂದು ರಾಜಯೋಗಿ ಡಾ.ಪಿ.ಎಚ್​.ಮಹೇಂದ್ರಪ್ಪ ತಿಳಿಸಿದರು.ಶಿರಾ ನಗರದ ಸೈಂಟ್​ ಆನ್ಸ್​ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರೇರಣಾ ತರಗತಿಯಲ್ಲಿ ಮಾತನಾಡಿ, ಮಕ್ಕಳು ಬುದ್ಧಿವಂತಿಕೆಯಲ್ಲಿ ಸರಿಸಮಾನರು. ಪ್ರತಿಯೊಬ್ಬರಲ್ಲಿಯೂ ಸಮಾನ ಮಾನವೀಯ ಸಂಪನ್ಮೂಲಗಳು, ನೆನಪಿನ ಶಕ್ತಿ, ಆಲೋಚನೆ, ಪ್ರಬುದ್ಧತೆ, ಛಲ ಮತ್ತು ಸಾಹಸ ಪ್ರವೃತ್ತಿಗಳು ಮಕ್ಕಳ ಅಂತರಂಗದಲ್ಲಿ ಸೂಕ್ತವಾಗಿರುತ್ತದೆ ಎಂದರು.ಶಿಕ್ಷಕರು ವಿದ್ಯಾರ್ಥಿ ಸ್ನೇಹ ಬೋಧನೆಯನ್ನು ರೂಢಿಸಿಕೊಳ್ಳಬೇಕು. ಶಿಕ್ಷಕರು ತನಗೆಲ್ಲವೂ ತಿಳಿದಿದೆ ಎಂಬ ಸರ್ವಾಧಿಕಾರಿ ಮನೋಧೋರಣೆಯಿಂದ ಹೊರಬಂದು ಅವರ ಅಂತರಂಗದ ಮನೋಭಾವವನ್ನು ಹೆಚ್ಚಿಸಲು ಅವರೊಂದಿಗೆ ಉತ್ತಮ ಸಂವಹನ ನಡೆಸಬೇಕು. ಈ ರೀತಿ ಬೋಧಿಸುವುದರಿಂದ ಮಕ್ಕಳಲ್ಲಿ ಕಲಿಯುವ ಆಸಕ್ತಿ. ಕಾರ್ಯ ಮತ್ತು ಕ್ರಿಯಾಶೀಲ ಸಾಧ್ಯತೆಗಳನ್ನು ಹುಟ್ಟುಹಾಕುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net