'ವಿದ್ಯಾರ್ಥಿಗಳ ಭಾಷೆ ಕಲಿಕೆಗೆ ಶಿಕ್ಷಕರು ನೆರವಾಗಿ'

1
Published on

ಮೈಸೂರು: ಭಾಷೆ ಕಲಿಕೆ ಈ ಆಧುನಿಕ ದಿನಗಳಲ್ಲಿ ಹೆಚ್ಚಾಗಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಹೆಚ್ಚು ಭಾಷೆ ತಿಳಿಸಿಕೊಡಲು ಶಿಕ್ಷಕರು ಮುಂದಾಗಬೇಕು ಎಂದು ಶಾಲಾ ಶಿಕ್ಷಣ(ಪದವಿ ಪೂರ್ವ) ಇಲಾಖೆಯ ಉಪ ನಿರ್ದೇಶಕ ಎಂ.ಮರಿಸ್ವಾಮಿ ಸಲಹೆ ನೀಡಿದರು.
ಮೈಸೂರು ಪಿಯು ಹಿಂದಿ ಪೋರಂ, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯಿಂದ ನಗರದ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ಒಂದು ದಿನದ ಹಿಂದಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಿಂದಿ ಭಾಷಾ ವಿಷಯದ ಫಲಿತಾಂಶ ಉತ್ತಮಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಕಾಲ ಕಾಲಕ್ಕೆ ಪಠ್ಯಕ್ರಮ, ಪ್ರಶ್ನೆ ಪತ್ರಿಕೆಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಗೆ ನೆರವಾಗಬೇಕು. ಭಾಷೆ ಕಲಿತಷ್ಟು ಹೆಚ್ಚು ಜ್ಞಾನ ಬೆಳೆಯುವುದರಿಂದ ಹೆಚ್ಚು, ಹೆಚ್ಚು ಭಾಷೆ ಕಲಿಯಲು ಪ್ರೇರಣೆ ನೀಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ದೇವರಾಜ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ರಮಾನಂದ ಮಾತನಾಡಿ, ಹಿಂದಿ ಭಾಷೆಯ ಕಲಿಕೆಯನ್ನು ಪರೀಕ್ಷಾ ಅಂಕ ಗಳಿಕೆಯ ಉದ್ದೇಶಕ್ಕೆ ಮಾತ್ರ ಸೀಮಿತಗೊಳಿಸದೆ, ಹಿಂದಿ ಭಾಷೆಯ ಮಹತ್ವ ಹಾಗೂ ಉಪಯೋಗಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಬೇಕು ಎಂದು ಹೇಳಿದರು.
ಮೈಸೂರು ಪಿಯು ಹಿಂದು ಪೋರಂ ಅಧ್ಯಕ್ಷ ಶಿಶುಪಾಲಗಾಂಧಿ ಅವರು ಫೋರಂನ ದೇಯೋದ್ದೇಶಗಳನ್ನು ಕುರಿತು ತಿಳಿಸಿಕೊಟ್ಟರಲ್ಲದೇ ಹಿಂದಿ ಭಾಷೆಯ ಪ್ರಗತಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕೋರಿದರು.
ಕಾರ್ಯಕ್ರಮದಲ್ಲಿ ಉಪ ನಿರ್ದೇಶಕ ಎಂ.ಮರಿಸ್ವಾಮಿ ಅವರನ್ನು ಗೌರವಿಸಲಾಯಿತು. ಫೋರಂನ ಕಾರ್ಯದರ್ಶಿ ಎಂ.ಕೆ.ಜಾಕೀರ್, ಉಪನ್ಯಾಸಕರಾದ ಪ್ರವೀಣ್ ಹೂಗಾರ್, ಡಾ.ಮೋಹನ್‌ಸಿಂಗ್, ಕೆ.ತನುಜಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net