ಶಿಕ್ಷಕರು ಜ್ಞಾನ ಪೂರ್ಣ ಸಂಪನ್ನರಾಗಿರ ಬೇಕು

ctd----2
Published on

ಚಿತ್ರದುರ್ಗ: ಶಿಕ್ಷಕರು ಜ್ಞಾನಪೂರ್ಣ ಸಂಪನ್ನರಾಗ ಬೇಕೆಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು. ರಂಗಸೌರಭ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಆಶ್ರಯದಲ್ಲಿ ನಗರದ ಬಾಪೂಜಿ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಈ ಚೆಗೆ ರಂಗ ಸೌರಭ ರಂಗೋತ್ಸವದ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ,ಸಂಗೀತ,ನಾಟಕ ಪ್ರದರ್ಶನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾ ಡಿ,ನಿರಂತರ ಓದು,ಕಾರ್ಯಕ್ಷಮತೆ,ವೃತ್ತಿ ಬದ್ಧತೆ ಉಳಿಸಿಕೊಳ್ಳುವ ಮೂಲಕ ಬೋಧನಾ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕೆಂದು ಶಿಕ್ಷಕ ರಿಗೆ ಸಲಹೆ ನೀಡಿದರು.

ಶಿಕ್ಷಣ ಮತ್ತು ರಂಗಭೂಮಿ ಕುರಿತು ಉಪನ್ಯಾಸ ನೀಡಿದ ರಂಗ ನಿರ್ದೇಶಕ ಕೆ.ಪಿ.ಎಂ.ಗಣೇಶಯ್ಯ,ಶಾಲಾ-ಕಾಲೇಜುಗಳಿಗೆ ರಂಗ ಶಿಕ್ಷಕರನ್ನು ನೇಮಿಸಿದರೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ಬೋಧನಾ ಪ್ರಕ್ರಿಯೆಗೆ ಶಕ್ತಿ ತುಂಬುತ್ತದೆ ಎಂದರು. ಪ್ರಾಚಾರ‌್ಯೆ ಎಂ. ಆರ್.ಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್,ಸಿ.ಪಿ.ಜ್ಞಾ ನದೇವ್,ಎಚ್.ಎನ್.ಶಿವಕುಮಾರ್,ಡಾ.ಹನುಮಂತರೆಡ್ಡಿ,ಒ.ಎಂ.ಮಂಜುನಾಥ,ಟಿ.ವೈ.ಗೀತಾ,ಎಸ್.ಮಂಜುನಾಥಪ್ಪ, ಸಂಘದ ನಿ ರ್ದೇಶಕ ಪಿ.ಎನ್.ಗಿರೀಶ್ ಇದ್ದರು.

ನಟ ಮೈಸೂರು ರಮಾನಂದ ರಚನೆ ಮತ್ತು ನಿರ್ದೇಶನದಲ್ಲಿ‘ನಾನಿನ್ನೂ ಸತ್ತಿಲ್ಲ’ಎಂಬ ಹಾಸ್ಯನಾಟಕವನ್ನು ಬೆಂಗಳೂರಿನ ಗೆಜ್ಜೆಹೆಜ್ಜೆ ರಂ ಗ ತಂಡದ ಕಲಾವಿದರು ಅಭಿನಯಿಸಿದರು. ಕೆ.ಸಿ.ರೇಖಾ ಪ್ರಾರ್ಥಿಸಿದರು. ಮಲ್ಲಿಕಾರ್ಜುನ ಗೌಡ ಸ್ವಾಗತಿಸಿ,ಎಸ್.ಎಂ.ಅಮೂಲ್ಯ ವಂದಿ ಸಿದರು. ಆರ್.ಟಿ.ದೀಪಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net