

ಬನ್ನೂರು: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಕರಿಲ್ಲದೇ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿಲ್ಲ ಎಂದು ರೋಟರಿ ಅಧ್ಯಕ್ಷ ಡಾ.ರಾಜೀವ್ ತಿಳಿಸಿದರು.
ಪಟ್ಟಣದ ಸಮೀಪದ ರೋಟರಿ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಎಲ್ಲ ಶಿಕ್ಷಕರನ್ನು ಗೌರವಿಸಿ ನಂತರ ಅವರು ಮಾತನಾಡಿದರು.
ಶಿಕ್ಷಕ ಎನ್ನುವ ಪದ ಜ್ಞಾನ, ಕೌಶಲ, ಮೌಲ್ಯ ನೀಡುವಂತ ವ್ಯಕ್ತಿಯನ್ನು ಸೂಚಿಸುತ್ತದೆ. ಆ ವ್ಯಕ್ತಿ ಔಪಚಾರಿಕ ಶಾಲಾ ವ್ಯವಸ್ಥೆಯಲ್ಲಿ ಪಠ್ಯಕ್ರಮದ ಪ್ರಕಾರ, ಪಾಠಗಳನ್ನು ಭೋದಿಸಿ ವಿದ್ಯಾರ್ಥಿಗಳ ಪ್ರಗತಿಯನ್ನು ನಿರ್ಣಯಿಸುವ ವೃತ್ತಿ ಪರ ಬೋಧಕರಾಗಿರುತ್ತಾರೆ ಎಂದು ತಿಳಿಸಿದರು.
ಪಠ್ಯಕ್ರಮದಂತೆ ಪಾಠಗಳನ್ನು ಸಿದ್ದಪಡಿಸಿ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ಹೇಳುವ ಮೂಲಕ, ಅವರ ಪ್ರಗತಿಯನ್ನು ಮೌಲ್ಯಮಾಪನ ಮಾಡುವುದರ ಜತೆಗೆ, ಶಿಸ್ತನ್ನು ಕಲಿಸುವಂತ ಮಹತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತಾರೆ. ಇಂತಹ ಶಿಕ್ಷಕರನ್ನು ನಾವೆಲ್ಲರೂ ಗುರುತಿಸಿ, ಅವರಿಗೆ ಗೌರವ ಸಮರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಅತ್ತಳ್ಳಿ ಕೆಂಪೇಗೌಡ, ಬಿ.ಎನ್.ಸುರೇಶ್, ಯೋಗೇಂದ್ರ, ವೆಂಕಟೇಶ್‌ಪ್ರಸಾದ್, ಶಿವಕುಮಾರ್‌ಸ್ವಾಮಿ, ಇಂಟರ್‌ನೆಟ್ ಕ್ಲಬ್ ಅಧ್ಯಕ್ಷ ಗಾಹನಾ ಸೇರಿದಂತೆ ಶಿಕ್ಷಕರು ಉಪಸ್ಥಿತರಿದ್ದರು.