

ಮದ್ದೂರು: ತಾಲೂಕಿನ ಕೆ.ಹೊನ್ನಲಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ 2006-2008ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಗುರು-ಶಿಷ್ಯರ ಸಮಾಗಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಹೆಚ್ಚು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಶಿಕ್ಷಕ ರಮೇಶ್ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ಗುರುಗಳಾದವರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಕಲಿಸುವುದರ ಜತೆಗೆ ಸನ್ನಡತೆ, ಸನ್ಮಾರ್ಗಗಳನ್ನು ಹೇಳಿಕೊಡುತ್ತಾರೆ. ನಂತರದ ದಿನಗಳಲ್ಲಿ ವಿದ್ಯಾರ್ಥಿಗಳು ಹಲವು ಸ್ಥಾನಗಳಿಗೆ ಹೋದ ನಂತರವೂ ಶಿಕ್ಷಕರನ್ನು ನೆನೆದು, ಅವರನ್ನು ಸತ್ಕರಿಸುವ ಕೆಲಸ ಉತ್ತಮ ನಡವಳಿಕೆಯಿಂದ ಕೂಡಿರುತ್ತದೆ ಎಂದರು.
ಹಿರಿಯ ಶಿಕ್ಷಕರಾದ ಅನಂತಮೂರ್ತಿ, ಜಯಮುದ್ದು, ರಮೇಶ್, ಪುಟ್ಟರಾಜು, ಪ್ರತಿಭಾ ನಾಯಕ್ , ಸೂರ್ಯನಾಯಕ್, ಚಿಕ್ಕಮರೀಗೌಡ, ಸಾವಿತ್ರಿ, ದೇವರಾಜು, ಬಿ.ವಿ.ಹಳ್ಳಿ ನಾರಾಯಣ್ ಸೇರಿದಂತೆ ಇತರ 20 ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಹಳೇ ವಿದ್ಯಾರ್ಥಿಗಳ ಬಳಗ ಅಶ್ವಿನಿ, ಚೈತ್ರಾ, ಸವಿತಾ, ಸುನೀತಾ, ಹನುಮಂತು, ಶಿವಣ್ಣ ಸೇರಿದಂತೆ ಶಾಲೆಯ ಶಿಕ್ಷಕರಾದ ರಾಜು, ಭಾರತಿ, ವನಿತಾ, ಚೇತನಾ, ಮಂಜುನಾಥ್, ಕಾರ್ತಿಕ್ ಸೇರಿದಂತೆ ಇತರರು ಇದ್ದರು.