

Gadag: ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ೨೦೨೩-೨೪ ನೇ ಸಾಲಿನ ಅತಿಥಿ ಶಿಕ್ಷಕರ ಬಾಕಿ ಮೊತ್ತ ಮತ್ತು ೨೦೨೪-೨೫ ನೇ ಸಾಲಿನ ಗೌರವ ಸಂಭಾವನೆಗಾಗಿ ಒಟ್ಟು ರೂ. ೧೫೪ ಕೋಟಿ ೨೯ ಲಕ್ಷ ೬೦ ಸಾವಿರ ಅನುದಾನವನ್ನು ಸರ್ಕಾರದ ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ೧೩ ಜಿಲ್ಲೆಗಳಾದ ಗದಗ, ಹಾವೇರಿ, ಉತ್ತರಕನ್ನಡ, ವಿಜಯಪುರ, ಬೆಳಗಾವಿ, ತುಮಕೂರು, ಕಲಬುರ್ಗಿ, ಹಾಸನ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಡಾವಣಗೇರೆ, ಹಾಗೂ ರಾಯಚೂರ ಈ ಜಿಲ್ಲೆಗಳಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ೨೦೨೩-೨೪ ನೇ ಸಾಲಿನ ಅವಧಿಯ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರಿಗೆ ಗೌರವ ಸಂಭಾವನೆ ಬಿಡುಗಡೆ ಆಗದೇ ಆರ್ಥಿಕ ತೊಂದರೆಯನ್ನು ಅನುಭವಿಸುತ್ತಿದ್ದರು.
ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿರುವ ಹಿನ್ನೆಲೆಯಲ್ಲಿ ಸರಕಾರ ಹಿಂದಿನ ಬಾಕಿ ವೇತನ ಅಲ್ಲದೇ ಪ್ರಸ್ತುತ ಸಪ್ಟಂಬರ್‌ದಿAದ ಮಾರ್ಚ ತಿಂಗಳವರೆಗೆ ಸಂಭಾವನೆಗೆ ಬೇಕಾಗುವ ರೂ. ೧೫೪ ಕೋಟಿ ೨೯ ಲಕ್ಷ ೬೦ ಸಾವಿರ ಅನುದಾನವನ್ನು ಬಿಡುಗಡೆ ಮಾಡಿರುವರು. ಕಾರಣ ಅತಿಥಿ ಶಿಕ್ಷಕರು ತಮಗೆ ಸಂಬAಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿಸಬೇಕೆAದು ಸಂಕನೂರ ಅವರು ತಿಳಿಸಿದ್ದಾರೆ.