ಬಳ್ಳಾರಿ : ಹಿಂದುಳಿದ ವರ್ಗಗಳ ಆಯೋಗದಿಂದ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆೆಯ ಮುಂದುವರಿಕೆಗೆ ವಿರೋಧಿಸಿ ಇಲ್ಲಿನ ತಾಪಂ ಆವರಣದಲ್ಲಿ ಶಿಕ್ಷಕರು ಭಾನುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸ್ಥಳಕ್ಕೆೆ ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಭೇಟಿ ನೀಡಿ ಮಾತನಾಡಿ, ಯಾವುದೇ ಕಾರಣಕ್ಕೂ ಸಮೀಕ್ಷೆೆ ನಿಲ್ಲಿಸಬೇಡಿ. ನೀವು ಮನೆ ಮನೆಗೆ ಹೋಗಿ ಸಮೀಕ್ಷೆೆ ನಡೆಸುವುದು ಬೇಡಿ. ಬದಲಿಗೆ ನಿಮ್ಮ ನಿಮ್ಮ ಶಾಲೆಗಳಿಗೆ ಹೋಗಿ ಸಮೀಕ್ಷೆೆಯಿಂದ ಯಾರು ತಪ್ಪಿ ಹೋಗಿದ್ದಾರೆ ಅವರನ್ನು ಸಮೀಕ್ಷೆೆ ಸೇರಿಸಿ ಎಂದು ಮನವಿ ಮಾಡಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆೆಯು(ಜಾತಿ ಜನಗಣತಿ) ಜಿಲ್ಲೆಯಲ್ಲಿ ಶೇ.95 ರಷ್ಟು ಪೂರ್ತಿಯಾಗಿದೆ. ಆರ್‌ಆರ್ ನಂಬರ್, ರೇಷನ್ ಕಾರ್ಡ್ ಹಾಗೂ 2025ರ ಜನಗಣತಿ ಪ್ರಕಾರ ಶೇ.100 ರಷ್ಟು ಸಮೀಕ್ಷೆೆಯಾಗಿಲ್ಲ. ಇವತ್ತು ಸಮೀಕ್ಷೆೆಯ ಕೊನೆಯ ದಿನವಾಗಿದ್ದು, ಎಲ್ಲರೂ ಸೇರಿ ಸಮೀಕ್ಷೆೆ ಪೂರ್ಣಗೊಳಿಸೋಣ ಎಂದರು.
ಜಿಲ್ಲೆಯಲ್ಲಿ ಮಾತ್ರ ಇನ್ನೆೆರಡು ದಿನ ಜಾತಿ ಜನಗಣತಿ ಸಮೀಕ್ಷೆೆ ನಡೆಸಲು ಆದೇಶ ನೀಡಲಾಗಿದೆ. ದೀಪಾವಳಿ ರಜೆಯಿದೆ. ಯಾರ ಮನೆಗೂ ಹೋದರೂ ಹಬ್ಬದ ದಿನ ಯಾಕೆ ಬಂದಿದ್ದೀರಿ ಎಂದು ಬೈಯುತ್ತಾರೆ. ದಸರಾ ಹಬ್ಬದಲ್ಲೂ ಸಮೀಕ್ಷೆೆ ಮಾಡಿದ್ದೇವೆ. ದೀಪವಾಳಿ ಹಬ್ಬದ ದಿನದಂದು ಸಹ ಜನಗಣತಿ ಸಮೀಕ್ಷೆೆ ಮಾಡೋಕೆ ಅಗಲ್ಲ ಎಂದು ಕೆಲ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದರು. ಕೆಲಕಾಲ ಜಿಪಂ ಸಿಇಒ ಹಾಗೂ ಶಿಕ್ಷಕರ ನಡುವೆ ವಾಗ್ವಾದ ನಡೆಯಿತು. ಬಳಿಕ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಶಿಕ್ಷಕರ ಮನವೊಲಿಸುವಲ್ಲಿ ಯಶಸ್ವಿಯಾದರು.
ಇದೇ ವೇಳೆ ಪೂರ್ವ ವಲಯ ಚೆರಾಕುಂಟಾ ಸರ್ಕಾರಿ ಶಾಲೆಯ ಶಿಕ್ಷಕಿ ರಾಗಮ್ಮ ಅವರು ಬಿಪಿ ಕಡಿಮೆಯಾಗಿ ತಲೆತಿರುಗಿ ಬಿದ್ದ ಘಟನೆ ನಡೆಯಿತು. ಕೂಡಲೇ ಬಿಮ್ಸ್ ಆಸ್ಪತ್ರೆೆಗೆ ಕರೆದುಕೊಂಡು ಹೋಗಿ ಚಿಕಿತ್ಸೆೆ ಕೊಡಿಸಲಾಯಿತು. ಸದ್ಯಕ್ಕೆೆ ಅವರ ಆರೋಗ್ಯ ಸುಧಾರಣೆಯಾಗಿದೆ ಎಂದು ತಿಳಿದು ಬಂದಿದೆ.