ಶಿಕ್ಷಕರಿಗೆ ಎಂದಿಗೂ ನಿವೃತ್ತಿ ಇಲ್ಲ

bnk teacher
ಬಣಕಲ್ ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ವಾಸುದೇವ್ ಭಟ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು. ಟಿ.ಬಿ.ಬಸವಲಿಂಗಪ್ಪ, ಸುವರ್ಣಲತಾ, ವಸಂತ ಪೂಜಾರಿ, ಸೈಯದ್ ನವೀದ್,ಕೆ.ಎಲ್.ರಘು ಇತರರಿದ್ದರು.
Published on

ಬಣಕಲ್: ಶಿಕ್ಷಕ ವೃತ್ತಿ ಪವಿತ್ರವಾದುದು. ಶಿಕ್ಷಕರಿಗೆ ಎಂದಿಗೂ ನಿವೃತ್ತಿ ಇಲ್ಲ ಎಂದು ಬಣಕಲ್ ಪ್ರೌಢಶಾಲೆ ಮುಖ್ಯಶಿಕ್ಷಕ ಪಿ.ವಾಸುದೇವ್ ಭಟ್ ಹೇಳಿದರು.

ಶಾಲೆಯಲ್ಲಿ 1989-90 ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸುಮಾರು ಹನ್ನೆರಡು ಸಾವಿರ ಮಕ್ಕಳಿಗೆ ವಿದ್ಯೆ ಕಲಿಸಿದ್ದು ಅವರು ವಿವಿಧ ವೃತ್ತಿ, ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸರ್ಕಾರದಿಂದ ಶಿಕ್ಷಕ ವೃತ್ತಿಗೆ ನಿವೃತ್ತಿ ಇದೆ. ಆದರೆ ಶಿಕ್ಷಕ ವೃತಿ ಜೀವನಕ್ಕೆ ಎಂದೂ ನಿವೃತ್ತಿಯಿಲ್ಲ ಎಂದರು. 35 ವರ್ಷಗಳ ಹಿಂದಿನ ವಿದ್ಯಾರ್ಥಿಗಳು ಸನ್ಮಾನಿಸಿದ್ದಕ್ಕೆ ನಾನು ಋಣಿಯಾಗಿದ್ದೇನೆ. ಕಲಿತ ಶಾಲೆ, ಶಿಕ್ಷಕರನ್ನು ಮರೆಯದಿರುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣ. ಶಾಲೆ ಅಭಿವೃದ್ಧಿಗೆ ಸಲಹೆ, ಸಹಕಾರ ನೀಡಿ ಎಂದರು.
ಬೆಳ್ತಂಗಡಿ ತಾಲೂಕಿನ ಕರಾಯ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಟಿ.ಬಿ.ಬಸವಲಿಂಗಪ್ಪ ಮಾತನಾಡಿ, ನಾನು ಈ ಶಾಲೆಯಲ್ಲಿ ಕಲಿತು ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಶಿಕ್ಷಕರ ಕಾರ್ಯವೈಖರಿ ಕಾರಣ. ಶಿಕ್ಷಣದೊಂದಿಗೆ ಸಂಸ್ಕಾರ ಕಲಿಸಿದ್ದಾರೆ ಎಂದರು.
ಮುಖ್ಯಶಿಕ್ಷಕ ಪಿ.ವಾಸುದೇವ್ ಭಟ್ ಹಾಗೂ ಪತ್ನಿ ವಿಜಯಲಕ್ಷ್ಮೀ ದಂಪತಿಯನ್ನು ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು. ಸೈಯದ್ ನವೀದ್, ಸುವರ್ಣಲತಾ, ವಸಂತ ಪೂಜಾರಿ, ವಿಜಯಕುಮಾರ್, ಕೆ.ಎಲ್.ರಘು, ಬಿ.ಎಸ್.ಕಲ್ಲೇಶ್, ಕೆ.ಇ.ಉಮೇಶ್, ಸಂತೋಷ್, ಸೈಯದ್ ನವೀದ್, ಟಿ.ಬಿ.ಬಸವಲಿಂಗಪ್ಪ, ಆಲ್ವಿನ್ ಥಾಮಸ್, ಎಸ್.ಎನ್.ರವಿ, ರಿಯಾಜ್ಜುದ್ದೀನ್, ಅನಿಲ್ ಮೊಂತೆರೊ, ಪ್ರಥಮ ದರ್ಜೆ ಸಹಾಯಕಿ ಭವ್ಯಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net