ಶಿಕ್ಷಕರಿಗೆ ಸಮರ್ಪಣಾ ಮನೋಭಾವ ಅಗತ್ಯ

BEECHI
ನರೇಗಲ್ಲ ಪಟ್ಟಣದ ಹಿರೇಮಠ ಸಭಾ ಭವನದಲ್ಲಿ ಸೋಮವಾರಿ ಆಯೋಜಿಸಿದ್ದ ಬೀಚಿ ಬಳಗದ ಸಭೆಯಲ್ಲಿ ಎಚ್. ಎಂ. ರತ್ನಮ್ಮ, ಆರ್. ಬಿ. ಪ್ರಭಣ್ಣವರ, ಶಂಕ್ರಮ್ಮ ಇಳಕಲ್ಲ, ಬಿ. ಆರ್. ರಂಗಣ್ಣವರ ಅವರನ್ನು ಸನ್ಮಾನಿಸಲಾಯಿತು. ಎಸ್. ಎನ್. ಹೂಲಗೇರಿ, ಕೆ. ಎಸ್. ಕಳಕಣ್ಣವರ, ಡಿ. ಎ. ಅರವಟಗಿಮಠ, ಎಂ. ಎಸ್. ದಢೇಸೂರಮಠ, ಅರುಣ ಕುಲಕರ್ಣಿ, ಶಿವಪುತ್ರಪ್ಪ ಸಂಗನಾಳ, ಜಿ. ಎ. ಬೆಲ್ಲದ, ಈಶ್ವರಪ್ಪ ಇಳಕಲ್ಲ ಇತರರು ಇದ್ದರು.
Published on

ನರೇಗಲ್ಲ: ಬರುವ ಸಂಬಳ, ಸಿಗುವ ಸೌಲಭ್ಯಗಳ ಬಗ್ಗೆ ಯೋಚಿಸದೆ ಸದಾಕಾಲ ಯಾರು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಬಗ್ಗೆ ಯೋಚಿಸುತ್ತಾರೋ ಅವರು ಮಕ್ಕಳ ಮನದಲ್ಲಿ ಶಾಶ್ವತ ಸ್ಥಾನ ಪಡೆಯುತ್ತಾರೆ. ಸಮರ್ಪಣಾ ಮನೋಭಾವ ಇದ್ದಾಗ ಮಾತ್ರ ಇಂತಹ ಕಾರ್ಯವಾಗಲು ಸಾಧ್ಯ ಎಂದು ಎಸ್.ಎ. ವಿ ಬಾಲಕಿಯರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್. ಎನ್. ಹೂಲಗೇರಿ ಹೇಳಿದರು.

ಬೀಚಿ ಬಳಗದ ಮಾಸಿಕ ಸಭೆ ಅಂಗವಾಗಿ ಪಟ್ಟಣದ ಹಿರೇಮಠದ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಕ್ಷಕ ವೃತ್ತಿ ತಪಸ್ಸಿದ್ದಂತೆ. ಹಿಂದಿನ ಜನ್ಮದಲ್ಲಿನ ಪುಣ್ಯದ ಅಂಶವೇನಾದರೂ ಉಳಿದಿದ್ದರೆ ಅಂತಹವರು ಮಾತ್ರ ಶಿಕ್ಷಕರಾಗಲು ಸಾಧ್ಯ. ಇದು ಎಲ್ಲರಿಗೂ ಸುಲಭದಲ್ಲಿ ಲಭಿಸುವಂತಹದಲ್ಲ ಎಂದರು.

ನಿವೃತ್ತ ಶಿಕ್ಷಕಿ ಎಚ್. ಎಂ. ರತ್ನಮ್ಮ, ಆರ್. ಬಿ. ಪ್ರಭಣ್ಣವರ, ಶಂಕ್ರಮ್ಮ ಇಳಕಲ್ಲ ಹಾಗೂ ಬಿ. ಆರ್. ರಂಗಣ್ಣವರ ಮತ್ತು ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ಭರತ ಈಶ್ವರ ಬೆಟಗೇರಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ. 90ಕ್ಕಿಂತ ಹೆಚ್ಚಿನ ಅಂಕ ಪಡೆದ ಚೇತನಾ ಮಹಾದೇವಪ್ಪ ಬೇವಿನಕಟ್ಟಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಬೀಚಿ ಬಳಗದ ಅಧ್ಯಕ್ಷ ಕೆ. ಎಸ್. ಕಳಕಣ್ಣವರ, ಶಿಕ್ಷಕ ಬಿ. ಟಿ. ತಾಳಿ ಮಾತನಾಡಿದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ, ನಿವೃತ್ತ ಶಿಕ್ಷಕ ಎಂ. ಎಸ್. ದಢೇಸೂರಮಠ, ಅರುಣ ಕುಲಕರ್ಣಿ, ನಿವೃತ್ತ ಸೈನಿಕ ಶಿವಪುತ್ರಪ್ಪ ಸಂಗನಾಳ, ಜಿ. ಎ. ಬೆಲ್ಲದ, ಈಶ್ವರಪ್ಪ ಇಳಕಲ್ಲ, ಎಸ್.ವಿ. ಕಳಕಣ್ಣವರ, ಎನ್.ಎಸ್. ಹಿರೇಮಠ, ಡಾ. ಆರ್.ಕೆ. ಗಚ್ಚಿನಮಠ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಎಚ್. ವಿ. ಈಟಿ, ಮಲ್ಲಯ್ಯ ಗುಂಡಗೋಪುರಮಠ, ಮುಖ್ಯ ಶಿಕ್ಷಕಿ ಭಾರತಿ ಶಿರ್ಸಿ, ಶಿಕ್ಷಕ ವಿ.ಎ. ಕುಂಬಾರ, ಆರ್.ಎಸ್. ನರೇಗಲ್ಲ, ಸಂಚಾಲಕ ಈಶ್ವರ ಬೆಟಗೇರಿ, ಶಿವಾನಂದ ಗೋಗೇರಿ ಇತರರಿದ್ದರು. ಶಿಕ್ಷಕಿ ನಿರ್ಮಲಾ ಹಿರೇಮಠ ಪ್ರಾರ್ಥಿಸಿದರು. ಶಿಕ್ಷಕ ಜೆ. ಎ. ಪಾಟೀಲ ಸ್ವಾಗತಿಸಿದರು. ಶಿವಯೋಗಿ ಜಕ್ಕಲಿ ನಿರೂಪಿಸಿದರು. ಮುಖ್ಯ ಶಿಕ್ಷಕ ಬಿ. ಬಿ. ಕುರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net