

ರಾಯಬಾಗ: ಸರ್ಕಾರಿ ಶಾಲೆಯಲ್ಲಿ ಎಲ್ಲ ಸೌಕರ್ಯ ಕಲ್ಪಿಸಿದ್ದು, ಪಾಲಕರು ತಮ್ಮ ಮಕ್ಕಳನ್ನು ತಪ್ಪದೆ ಕಳುಹಿಸಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ತಾಲೂಕಿನ ಕಂಚಕರವಾಡಿ ಗ್ರಾಮದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ರೂ. 36 ಲಕ್ಷ ರೂ. ಅನುದಾನದಲ್ಲಿ 2 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಶಿಕ್ಷಕರು ಮಕ್ಕಳಿಗೆ ಒಳ್ಳೆಯ ಬೋಧನೆ ಮಾಡಬೇಕು. ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತಿದ್ದರೆ ಗಮನಕ್ಕೆ ತಂದರೆ ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಗುತ್ತಿಗೆದಾರರು ಕೊಠಡಿಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕೆಂದು ಸೂಚಿಸಿದರು.
ಬಿಆರ್‌ಸಿ ಬಸವರಾಜ ಕಾಂಬಳೆ, ಎಇ ವೈ.ಆರ್.ಕಾಂಬಳೆ, ಪಿಡಿಒ ಹನುಮಂತ ಖಿಲಾರೆ, ಬಸವರಾಜ ಡೋಣವಾಡೆ, ಕಲ್ಲಪ್ಪ ಸನದಿ, ಅಣ್ಣಾಸಾಬ ಬೆಳಸಿ, ರಾಮು ಶಮನೇವಾಡಿ, ಶಿವಾಜಿ ಕಳ್ಳಿ, ಅಲಗೌಡ ಪಾಟೀಲ, ಅಶೋಕ ಶಿಂಗೆ, ವಿವೇಕ ಮೇತ್ರಿ, ನಜೀರ್ ಮುಲ್ಲಾ, ಶಿಕ್ಷಕರಾದ ಮಹಾದೇವ ಕೊರವಿ, ದೀಪಾ ಕಾಂಬಳೆ, ಜಯಶ್ರೀ ಮಾನೆ ಇತರರಿದ್ದರು.