‘ಟೀಂ ಮೈಸೂರು’ನಿಂದ ಶಿಕ್ಷಕರಿಗೆ ಸನ್ಮಾನ

Teachers honored by Team Mysore
Published on

ಮೈಸೂರು: ಟೀಂ ಮೈಸೂರು ಮತ್ತು ಇಂದಿರಾನಗರ ಲಯನ್ಸ್ ಕ್ಲಬ್ ವತಿಯಿಂದ ಗುರುವಾರ ಶಿಕ್ಷಕರ ದಿನಾಚರಣೆ ಪ್ರಯುಕ್ತ ಶಿಕ್ಷಕರಿಗೆ ಗೌರವ ಸಮಪರ್ಣಾ ಸಮಾರಂಭ ಏರ್ಪಡಿಸಲಾಗಿತ್ತು.

ಮಾಜಿ ರಾಷ್ಟ್ರಪತಿ ಡಾ.ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಲಯನ್ಸ್ ಕ್ಲಬ್ ಸದಸ್ಯ ಅಚ್ಯುತ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಧನೆ ಮಾಡಿದವರ ಹಿಂದೆ ಶಿಕ್ಷಕರ ಪರಿಶ್ರಮ ಇರುತ್ತದೆ ಎಂದರು.

ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ನಾಗರಾಜ್ ಮಾತನಾಡಿ, ಸಮಾಜಕ್ಕೆ ಉತ್ತಮ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುವ ಶಿಕ್ಷಕರಿಗೆ ಗೌರವ ಸಲ್ಲಿಸುವ ಈ ಕಾರ್ಯಕ್ರಮ ನಿಜಕ್ಕೂ ಅಭಿನಂದನಾರ್ಹ. ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು ಎಂದರು.

ಕಾರ್ಯಕ್ರಮದಲ್ಲಿ 21 ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ವೇದಿಕೆಯಲ್ಲಿ ಟೀಂ ಮೈಸೂರು ತಂಡದ ಸಂಚಾಲಕ ಗೋಕುಲ್ ಗೋವರ್ಧನ್, ಸದಸ್ಯರಾದ ಯಶವಂತ್, ಕಿರಣ್ ಜೈರಾಮೇಗೌಡ, ಪ್ರಸನ್ನ ರಾಜ್, ಹೇಮಂತ್, ಹಿರಿಯಣ್ಣ, ರಾಮ್ ಪ್ರಸಾದ್, ಮನೋಹರ್, ಸುನೀಲ್, ಮಂಜುನಾಥ್, ಜಯಂತ್, ಕೆ.ವಿ. ಬಸವರಾಜು, ಚೇತನ್, ಶೇಖರ್, ಗೋವಿತ್ ಕಿರಣ್, ಮಲ್ಲೇಶ್, ಅಭಿನಂದನ್, ಬಾಲು, ಸುಗುಣ ಚಂದ್ರಶೇಖರ್, ಲಯನ್ಸ್ ಕ್ಲಬ್ ಸದಸ್ಯರಾದ ರಾಜರತ್ನಮ್, ವೆಂಕಟೇಶ್, ಅಭಿಷೇಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net