ರೋಟರಿ ಮಡಿಕೇರಿ ವುಡ್ಸ್‌ನಿಂದ ಶಿಕ್ಷಕರಿಗೆ ಸನ್ಮಾನ

rotry
Published on

ಮಡಿಕೇರಿ: ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಾ ಬಂದಿರುವ ವಿವಿಧ ಶಾಲಾಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಒಂಭತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ರಾಖಿ ಪೂವಣ್ಣ, ಸವಿತಾ ಪ್ರಶಾಂತ್, ವೀಣಾ ದಿವಾಕರ್, ಉಷಾ ಪ್ರದೀಪ್, ಶಶಿಕಲಾ ರವೀಂದ್ರ, ಕಾವೇರಿ, ವಿದ್ಯಾ.ಬಿ.ಸಿ, ಶೋಭಿತಾ ರವೀಂದ್ರ ಮತ್ತು ಡೀನಾ.ಹೆಚ್.ಡಿ ಕ್ಲಬ್‌ನ ಸನ್ಮಾನಕ್ಕೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ರೋಟರಿ ವಲಯ ೬ರ ಎ.ಜಿ.ರೊ.ಧಿಲನ್ ಚಂಗಪ್ಪ ಮಾತನಾಡಿ, ವುಡ್ಸ್ ಸಂಸ್ಥೆ ಆರಂಭದಿಂದಲೂ ಉತ್ತಮ ಕೆಲಸಗಳನ್ನು ಮಾಡುತ್ತಾ ಬಂದಿದೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ವೇಗವಾಗಿ ಅತ್ಯುತ್ತಮ ಕ್ಲಬ್ ಆಗುವತ್ತ ಹೆಜ್ಜೆ ಹಾಕುತ್ತಿದೆ. ಭವಿಷ್ಯದ ದಿನಗಳಲ್ಲೂ ಈ ರೀತಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರೋಟರಿ ಜಿಲ್ಲೆಯಲ್ಲಿ ಬೆಳಗುವಂತಾಗಲಿ ಎಂದು ಹಾರೈಸಿದರು.

ಝೋನಲ್ ಲೆಫ್ಟಿನೆಂಟ್ ರೊ.ಕೆ.ಸಿ.ಕಾರ್ಯಪ್ಪ ಮಾತನಾಡಿ, ಶಿಕ್ಷಕರು ಭವಿಷ್ಯವನ್ನು ರೂಪಿಸುತ್ತಾರೆ. ಶಿಕ್ಷಕರನ್ನು ಗುರುತಿಸಿ ಸನ್ಮಾನಿಸುವುದು ರಾಷ್ಟ್ರಕ್ಕೆ ಕೊಡುಗೆ ನೀಡಿದಂತೆ ಎಂದು ಬಣ್ಣಿಸಿದರು.

ಕ್ಲಬ್ ಸದಸ್ಯ ರೊ.ಪ್ರಶಾಂತ್ ಶಿಕ್ಷಕರ ದಿನಾಚರಣೆಯ ಹಿನ್ನಲೆಯನ್ನು ಸಾಂದರ್ಭಿಕವಾಗಿ ಹಂಚಿಕೊಂಡರು. ಕ್ಲಬ್ ಅಧ್ಯಕ್ಷರಾದ ರೊ.ಕರಣ್ ಕುಂದರ್ ಮಾತನಾಡಿ ಮುಂದಿನ ದಿನಗಳಲ್ಲಿ ಕ್ಲಬ್ ವತಿಯಿಂದ ನಡೆಸಲಾಗುವ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ರೊ.ಪ್ರಮಿಳಾ ಶೆಟ್ಟಿ, ರೋಟರಿ ಮಿಸ್ಟಿಹಿಲ್ಸ್‌ನ ರೊ.ಅನಂತಶಯನ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. ಸಭಾ ಕಾರ್ಯಕ್ರಮದ ನಂತರ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net