

ಕುಲಗೋಡ: ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಶಿಕ್ಷಕರಿಗಿದ್ದು, ಅವರು ಬದ್ಧತೆ ಹಾಗೂ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಸಮೀಪದ ಹೊಸಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಡಾ.ಎಸ್. ರಾಧಾಕೃಷ್ಣನ್ ಜನ್ಮದಿನ ಮತ್ತು ಮೂಡಲಗಿ ತಾಲೂಕುಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಸಕನಾದಾಗಿನಿಂದ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತ ಬಂದಿದ್ದೇನೆ. ಹೀಗಾಗಿ ಮೂಡಲಗಿ ಶೈಕ್ಷಣಿಕ ವಲಯವು ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.
ಗುರ್ಲಾಪುರ, ನಾಗನೂರ, ಕಲ್ಲೊಳ್ಳಿ, ಅರಬಾವಿ, ಮಲ್ಲಾಪುರ ಪಿಜಿ, ಮೆಳವಂಕಿ, ಹುಣಶ್ಯಾಳ ಪಿಜಿ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಕೇಂದ್ರೀಯ ಮಾದರಿಯ ಪಿಎಂಶ್ರೀ ಶಾಲೆಗಳನ್ನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ದುರದುಂಡಿ ಮತ್ತು ತುಕ್ಕಾನಟ್ಟಿ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆ ಸೌಕರ್ಯ ಒದಗಿಸುವ ಭರವಸೆ ನೀಡಿದರು.
ನಿವೃತ್ತ ಶಿಕ್ಷಕರನ್ನು ಸತ್ಕರಿಸಲಾಯಿತು. ಸುಣಧೋಳಿ ಶಿವಾನಂದ ಸ್ವಾಮೀಜಿ, ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ, ಹುಣಶ್ಯಾಳ ಪಿವೈ ಗ್ರಾಪಂ ಅಧ್ಯಕ್ಷ ಜಗದೀಶ ಡೊಳ್ಳಿ, ಉಪಾಧ್ಯಕ್ಷೆ ಕಾಳವ್ವ ಗೌಡನ್ನವರ, ತಹಸೀಲ್ದಾರ್‌ಗಳಾದ ಮಹಾದೇವ ಸನಮುರಿ, ಡಾ.ಮೋಹನ ಭಸ್ಮೆ, ತಾಪಂ ಇಒ ಎ್.ಜಿ. ಚಿನ್ನಣವರ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಪರಮೇಶ್ವರ ಹೊಸಮನಿ, ಪಿಕೆಪಿಎಸ್ ಅಧ್ಯಕ್ಷ ಅಜ್ಜಪ್ಪ ಗಿರಡ್ಡಿ, ಎಂ.ಎಂ. ಪಾಟೀಲ, ರವಿ ಪರುಶೆಟ್ಟಿ, ಹಣಮಂತ ತೇರದಾಳ, ಕರ್ನಲ್ ಪರಶುರಾಮ ನಾಯಿಕ, ಸಿಪಿಐ ಶ್ರೀಶೈಲ ಬ್ಯಾಕೂಡ, ಸಿಡಿಪಿಒ ವೈ.ಕೆ.ಗದಾಡಿ, ಮಂಜುನಾಥ ಸಣ್ಣಕ್ಕಿ, ಎ.ಬಿ.ಮಲಬನ್ನವರ, ಎಸ್ಡಿಎಂಸಿ ಅಧ್ಯಕ್ಷ ಜಿ.ಎಸ್. ಕಂಬಳಿ ಇತರರಿದ್ದರು.