

ಎನ್.ಆರ್.ಪುರ: ಧಾರ್ಮಿಕ ಕ್ಷೇತ್ರದ ಗುರುಗಳಿಗೂ, ಶಿಕ್ಷಣ ಕ್ಷೇತ್ರದ ಗುರುಗಳಿಗೂ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ ಎಂದು ಹರಿಹರಪುರದ ಅಭಿನವ ರಮಾನಂದ ಸರಸ್ವತಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಬಿ.ಪಿ.ದಯಾನಂದ್ ತಿಳಿಸಿದರು.
ಬೆಮ್ಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತ ಮುಖ್ಯಶಿಕ್ಷಕ ರೇವಣಪ್ಪ ಅವರಿಗೆ ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ನಿವೃತ್ತ ಮುಖ್ಯಶಿಕ್ಷಕ ರೇವಣಪ್ಪ 29 ವರ್ಷ ಕಮಲಾಪುರ ಶಾಲೆ ಹಾಗೂ ಬೆಮ್ಮನೆ ಶಾಲೆಯಲ್ಲಿ ಮಾತ್ರ ಸೇವೆ ಸಲ್ಲಿಸಿದ್ದಾರೆ. ಮಕ್ಕಳ ಸಂಖ್ಯೆ ಕಡಿಮೆಯಾಗಿ ಶಾಲೆ ಮುಚ್ಚುವ ಹಂತ ಬಂದಾಗ ಗ್ರಾಮಸ್ಥರ ಸಹಕಾರದಿಂದ ಶಾಲೆ ಉಳಿಸುವ ಕೆಲಸ ಮಾಡಿದ್ದಾರೆ. 2007ರಲ್ಲಿ ಬೆಮ್ಮನೆ ಶಾಲೆಗೆ ಬಂದಿದ್ದು 18 ವರ್ಷ ಪ್ರಾಮಾಣಿಕವಾಗಿ ಶಾಲೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು.
ನಿವೃತ್ತ ಮುಖ್ಯಶಿಕ್ಷಕ ರೇವಣಪ್ಪ ಅವರನ್ನು ಶಾಲೆ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು, ಸರ್ಕಾರಿ ನೌಕರರ ಸಂಘ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದಿಂದ ಸನ್ಮಾನಿಸಲಾಯಿತು. ಶಾಲೆಯಿಂದ ಸಮುದಾಯ ಭವನದವರೆಗೆ ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಸೀತೂರು ಸಹಕಾರ ಸಂಘದ ಅಧ್ಯಕ್ಷ ಬೆಮ್ಮನೆ ಮೋಹನ್, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯಶಿಕ್ಷರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಎಸ್‌ಡಿಎಂಸಿ ಅಧ್ಯಕ್ಷ ಕೊನೋಡಿ ಗಣೇಶ್ , ಪೂರ್ಣಿಮ ರೇವಣಪ್ಪ, ಬಿ.ಎಸ್.ಮಂಜುನಾಥ್, ವಿಜಯ, ಸಿಆರ್‌ಪಿ ಓಂಕಾರಪ್ಪ, ಕೃಷ್ಣಮೂರ್ತಿ, ಚಂದ್ರಶೇಖರ, ಸುಂದರಿ, ಬಿ.ಟಿ.ರಘು, ರಂಗಪ್ಪ, ಆರ್.ನಾಗರಾಜ್, ಬೋಗೇಶ್, ನಾಗೇಶ್, ಅನಿಲ್‌ಕುಮಾರ್, ಸುಬೋದ್ ಇದ್ದರು.