ಶಿಕ್ಷಕರು ಸರಿದಾರಿ ತೋರುವ ಮಾರ್ಗದರ್ಶಕರು

Gorebala Teacher
ಗೊರೇಬಾಳ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕಿ ವನಮಾಲಾ, ಸಹ ಶಿಕ್ಷಕರಾದ ಸರೋಜಾ, ಭೂಮಿಕಾ, ದೇವಿ, ರೇಖಾ, ಚಾಮುಂಡಿ, ಮೀನಾಕ್ಷಿ ಇತರರಿದ್ದರು.
Published on

ಗೊರೇಬಾಳ: ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿರುತ್ತದೆ ಎಂದು ಮುಖ್ಯಶಿಕ್ಷಕಿ ವನಮಾಲಾ ಹೇಳಿದರು.

ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನೆಯ ಮೊದಲ ಪಾಠ ಶಾಲೆ ತಾಯಿಯಿಂದ ಆರಂಭವಾದರೆ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಕರು ಜೀವನದ ಆಧಾರ ಸ್ತಂಭವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಸಹ ಶಿಕ್ಷಕರಾದ ಸರೋಜಾ, ಭೂಮಿಕಾ, ದೇವಿ, ರೇಖಾ, ಚಾಮುಂಡಿ, ಮೀನಾಕ್ಷಿ, ಶಾಂತಮ್ಮ, ಅಂಬಿಕಾ, ಪಾರ್ವತಿ ಮತ್ತು ಸರಸ್ವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net