ಮುಧೋಳದಲ್ಲಿಂದು ಶಿಕ್ಷಕರ ಪ್ರಥಮ ಕವಿಗೋಷ್ಠಿ

Teachers' first poetry conference at Mudhol
Published on

ಮುಧೋಳ: ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ವತಿಯಿಂದ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕರ ಕವಿಗೋಷ್ಠಿ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಸೆ.3 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಮುಲ್ಲಾ ಉದ್ಘಾಟಿಸುವರು. ನಿವೃತ್ತ ಡಿಡಿಪಿಐ ಎಂ.ಜಿ.ದಾಸರ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಮನ್ವಯಾಧಿಕಾರಿ ಎ.ಆರ್.ಛಬ್ಬಿ, ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಅಧ್ಯಕ್ಷೆ ಲಲಿತಾ ಹೊಸಮನಿ, ಪತ್ರಕರ್ತ ವೆಂಕಟೇಶ ಗುಡೆಪ್ಪನವರ, ಕಸಾಪ ತಾಲೂಕು ಅಧ್ಯಕ್ಷ ಆನಂದ ಪೂಜಾರಿ, ಐ.ಎಂ.ಧಾರವಾಡ, ಆರ್.ಜಿ.ಕೋಲೂರ, ಮಹೇಶ ದಿವಾಣ ಉಪಸ್ಥಿತರಿರುವರು. ಸಾಹಿತಿ ಮಲ್ಲಿಕಾರ್ಜುನ ಅರಬಿ ಆಶಯ ನುಡಿ ಹೇಳುವರು.

ಕವಿಗೋಷ್ಠಿಯಲ್ಲಿ ಕೆ.ಬಿ.ಮೊರಬ, ಶೈಲಾ ಲಿಂಗದ, ಆನಂದ ಶಿರಬೂರ, ಗಿರಿಜಾ ಪಾಟೀಲ, ಮಂಜುಳಾ ಕಲ್ಯಾಣಿ, ರಾಮನಗೌಡ ಪಾಟೀಲ, ಜಯಪ್ರಕಾಶ ಆನೂರ, ರತ್ನಾಕರ ಶಿರೋಳ, ನಿಂಗಣ್ಣ ಮುದ್ದಾಪುರ, ಗೀತಾ ತುರಮುರಿ, ಬಸವರಾಜ ಬಲಕುಂದಿ, ವಿಜಯಕುಮಾರ ಬಡಿಗೇರ, ಸದಾಶಿವ ಕಗಲಗೊಂಬ, ಶಕುಂತಲಾ ವಜ್ಜರಮಟ್ಟಿ, ರಮೇಶ ಕಂಕನವಾಡಿ, ಮಹಾಂತೇಶ ಕುಂಬಾರ, ರಾಘವೇಂದ್ರ ನೀಲಣ್ಣವರ, ಸದಾಶಿವ ಕುಂಬಾರ, ಗುರುನಾಥ ಬೇವಿನಗಿಡದ, ಹನುಮಂತ ಕೊಳಜಿ, ವಿ.ಸಿ.ತೋಟದ, ಇಂದಿರಾ ಸಾತನೂರ, ವಿಜಯಲಕ್ಷ್ಮೀ ಹೊಸಮನಿ, ಪ್ರಕಾಶ ಪೀಠಕ, ಪ್ರಕಾಶ ಬಿರಾದಾರ, ಉಮಾ ಕಾತರಕಿ, ರಶ್ಮಿ ಗಿರಡ್ಡಿ, ನಂದಿನಿ ಬಬಲಿ, ಶಕುಂತಲಾ ಹುಲ್ಲನ್ನವರ, ಶಿವಾನಂದ ಬುರುಡ, ಸವಿತಾ ಟಕ್ಕನವರ, ಪ್ರೇಮಾ ಹಿರೇಮಠ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net