

ಮಡಿಕೇರಿ: ಮಡಿಕೇರಿಯ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಹೊರೂರು-ಕೊರೇಕೊಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯರಿಗೆ ಸನ್ಮಾನ ಹಾಗೂ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಆಯೋಜಿಸಲಾಗಿತ್ತು.
ಹೊರೂರು ಕಾರೇಕೊಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಡಿ.ಪಿ.ನಾಗರತ್ಮಮ್ಮ, ರೋಸ್ಲಿನ್ ರೋಚ ಅವರ ಗ್ರಾಮೀಣ ವಿಭಾಗದ ಶಾಲಾ ಶಿಕ್ಷಣ ಸೇವೆಯನ್ನು ಪರಿಗಣಿಸಿ ಇನ್ನರ್ ವೀಲ್ನ ವತಿಯಿಂದ ಸನ್ಮಾನಿಸಿ ಅವರ ಸೇವೆಯನ್ನು ಪ್ರೋತ್ಸಾಹಿಸಲಾಯಿತು.
ಶಾಲಾ ಮಕ್ಕಳ ಆರೋಗ್ಯ ತಪಾಸಣೆಯನ್ನು ಡಾ.ರೇಣುಕಾ ಸುಧಾಕರ್ ನೆರವೇರಿಸಿ ಮಕ್ಕಳಿಗೆ ಅವಶ್ಯಕವಾದ ಔಷಧಿಯನ್ನು ನೀಡಿದರು. ಶಾಲೆಯಲ್ಲಿ ಸುಮಾರು ೧೬ ಮಕ್ಕಳು ಹಾಗೂ ೨ ಶಿಕ್ಷಕಿಯರು ಇದ್ದಾರೆ.
ಇನ್ನರ್ ವೀಲ್ ಸಂಸ್ಥೆಯ ಕಾಯದರ್ಶಿ ಲಲಿತಾ ರಾಘವನ್, ನಿರ್ದೇಶಕಿಯರಾದ ಅಗ್ನೇಸ್ ಮುತ್ತಣ್ಣ, ಬೊಳ್ಳು ಮೇದಪ್ಪ, ಲತಾ ಸುಬ್ಬಯ್ಯ ಹಾಜರಿದ್ದರು.
ಮಕ್ಕಳಿಗೆಲ್ಲಾ ಉಚಿತ ನೋಟ್ ಬುಕ್, ಚಿತ್ರಕಲೆಯ ಸಾಮಾಗ್ರಿಗಳನ್ನು ನೀಡಿ, ಶಾಲೆಗೆ ದಿನನಿತ್ಯ ಬರುವಂತೆ ಪ್ರೋತ್ಸಾಹಿಸಲಾಯಿತು.