

ಮೈಸೂರು: ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ಶಿಕ್ಷಕರ ದಿನ ಹಾಗೂ ಇಂಜಿನಿಯರ್ಸ್ ದಿನ ಆಚರಿಸಲಾಯಿತು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಲ್.ಅರುಣ್‌ಕುಮಾರ್, ಇತರ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ ಇಂಜಿನಿರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಡಾ.ಪ್ರಕಾಶ್‌ಕುರವಟ್ಟಿ, ಮೆಕಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ.ಚೇತನ್ ಮತ್ತು ಸಿವಿಲ್ ವಿಭಾಗದ ಸಹ ಪ್ರಾಧ್ಯಾಪಕಿ ಎಚ್.ಜಿ.ಶ್ರುತಿ ಅವರ ಸೇವೆಯನ್ನು ಪರಿಗಣಿಸಿ ‘ಉತ್ತಮ ಶಿಕ್ಷಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪಿಎಚ್‌ಡಿ ಪದವಿ ಪಡೆದ ಕಾಲೇಜಿನ ಇಇ ವಿಭಾಗದ ಪ್ರಾಧ್ಯಾಪಕ ವಿನೋದ್‌ಕುಮಾರ್, ಕಂಪ್ಯೂಟರ್‌ಸೈನ್ಸ್ ವಿಭಾಗದ ಸುನೀತಾ ಪಟೇಲ್, ಶಾಲಿನಿ ಹ್ಯಾನೋಕ್, ಎ.ಐಎಂ.ಎಲ್ ವಿಭಾಗದ ಹುಸ್ನಾಜೋಹರ ಹಾಗೂ ಇ ಸಿ ವಿಭಾಗದ ಪವಿತ್ರಾ ಅವರನ್ನು ಅಭಿನಂದಿಸಲಾಯಿತು. ಪ್ರಥಮ ದರ್ಜೆ ಸಹಾಯಕ ನನ್ನಯ್ಯ ಹಾಗೂ ಸಹಾಯಕ ನೌಕರ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯದರ್ಶಿ ಕೆ.ಶಿವಶಂಕರ್, ಖಜಾಂಚಿ ಆರ್.ವೀರೇಶ್, ಆಡಳಿತ ಮಂಡಳಿ ಸದಸ್ಯರಾದ ಎಚ್. ವೆಂಕಟೇಶ್, ಡಾ. ಶಕೀಬ್ ಉರ್ ರಹಮಾನ್, ಡಾ. ಧೀರೇಂದ್ರಕುಮಾರ್ ಆರ್.ಮೆಹ್ತಾ, ಪ್ರಾಂಶುಪಾಲ ಡಾ.ಎ.ಕೆ.ಮೂರ್ತಿ, ಡೀನ್‌ಗಳಾದ ಡಾ.ಎಂ.ಎಸ್.ಗೋವಿಂದೇಗೌಡ, ಡಾ.ಭಾಗ್ಯಶ್ರೀ, ಎಸ್.ಆರ್. ಡಾ.ಯತೀಶ, ಆಡಳಿತಾಧಿಕಾರಿ ಡಾ.ಸಚ್ಚಿದಾನಂದ ಮೂರ್ತಿ, ಡಾ.ಬಸವರಾಜ್ ಇತರರು ಇದ್ದರು.