ಮಕ್ಕಳ ಪ್ರಗತಿಗೆ ಶಿಕ್ಷಕರ ಶ್ರಮ ಅಪಾರ

vemagal 111
Published on

 ವೇಮಗಲ್:​ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಯಾವುದರಲ್ಲೂ ಕಮ್ಮಿ ಇಲ್ಲ. ಅದು ವಿಶೇಷವಾಗಿ ಕೋಲಾರ ಜಿಲ್ಲೆಯಲ್ಲಿ ಮಾತಿನಲ್ಲಿ ಹೇಳುವುದಲ್ಲ, ಇದಕ್ಕೆ ತನ್ನದೇ ಇತಿಹಾಸವೇ ಇದೆ. ಈ ಹಿಂದೆ ರಾಜ್ಯಕ್ಕೆ ಅತಿ ಹೆಚ್ಚು ಐಎಎಸ್​, ಐಪಿಎಸ್​ ಹಾಗೂ ಉನ್ನತ ಹುದ್ದೆಗಳು ನಾನಾ ಇಲಾಖೆಯ ಅಧಿಕಾರಿಗಳು ಈ ಕೋಲಾರ ಜಿಲ್ಲೆಯವರೇ ಎಂದು ಕೋಲಾರ ಪೊಲೀಸ್​ ವರಿಷ್ಠಾಧಿಕಾರಿ ಬಿ.ನಿಖಿಲ್​ ತಿಳಿಸಿದರು.

ಪಟ್ಟಣದ ಕರ್ನಾಟಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಟಾಟಾ ಎಲೆಕ್ಟ್ರಾನಿಕ್ಸ್​ ಕಂಪನಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಬೆಳವಣಿಗೆ ಬಹಳ ಅದ್ಭುತವಾಗಿ ಕಣ್ಣ ಮುಂದೆ ಕಾಣಿಸುತ್ತಿದೆ. ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ಶಿಕ್ಷಕರು ಪಾಲಕರು ಈ ಭಾಗದ ಮುಖಂಡರ ಶ್ರಮ ಬಹಳಷ್ಟುರುತ್ತದೆ ಎಂದರು.

ಕಂಪನಿಗಳ ಮುಂದೆ ಹೋರಾಟ ಅವಶ್ಯಕತೆ ಇಲ್ಲ. ಒಂದು ಪತ್ರದ ಮೂಲಕ ಮನವಿ ಮಾಡಿ ಅದರ ಬೆಲೆಯೇ ಬೇರೆ, ಸಾಧ್ಯವಾದರೆ ಚರ್ಚೆ ಮಾಡಿ ದೊಡ್ಡ ರೀತಿಯ ಯೋಜನೆಗಳೇ ಮಾಡಬಹುದು. ಶಾಲೆಯ ಮಕ್ಕಳು ವಿಶ್ವದಲ್ಲೇ ಹೆಸರು ಮಾಡಲಿ, ಜತೆಯಲ್ಲಿ ಟಾಟಾ ಕಂಪನಿಯವರಿಗೆ ಮುಂದಿನ ದಿನಗಳಲ್ಲಿ ಪುಸ್ತಕಗಳನ್ನು ದೇಣಿಗೆ ನೀಡಲು ಮನವಿ ಮಾಡಿದರು.

ಕುರುಗಲ್​ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್​.ಎಂ ವೆಂಕಟೇಶ್​ ಮಾತನಾಡಿ, ಈ ಭಾಗದಲ್ಲಿ ಸಿಎಸ್​ರ್​ ಹಣ ಉಪಯೋಗಿಸುವಲ್ಲಿ ಟಾಟಾ ಎಲೆಕ್ಟ್ರಾನಿಕ್​ ಕಂಪನಿ ಅವರು ಮುಂಚೂಣಿಯಲ್ಲಿರುವುದು ಶ್ಲಾಘನೀಯ. ಸುಮಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಶಾಲೆಯಲ್ಲಿ 20 ಲಕ್ಷ ರೂ. ವೆಚ್ಚದ ಕೆಲಸ ಮಾಡಿಕೊಟ್ಟಿದ್ದಾರೆ. ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮತಿ ಪಡುವಣೆ ಮಾತನಾಡಿ, ಐಎಎಸ್​,ಐಪಿಎಸ್​, ಐಎಫ್​ಎಸ್​ ಇಂತಹ ಹುದ್ದೆಗಳು ದೇವರ ಸ್ಥಾನಗಳು ಎಂದುಕೊಂಡಿದ್ದೇನೆ. ಈ ಶಾಲೆಯ ಅಭಿವೃದ್ಧಿ ಕಣ್ಣ ಮುಂದೆ ಎದ್ದು ಕಾಣುತ್ತಿದೆ. ಉತ್ತಮ ವಾತಾವರಣವಿದೆ ಸರ್ಕಾರಿ ಶಾಲೆಗಳ ಬೆಳವಣಿಗೆ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ ಎಂದರು.

ಟಾಟಾ ಎಲೆಕ್ಟ್ರಾನಿಕ್ಸ್​ ಕಂಪನಿಯ ಮಧು.ಜಿ ಮಾತನಾಡಿ, ಕಂಪನಿಯ ಮೂಲ ಉದ್ದೇಶ ಶಿಕ್ಷಣ -ಆರೋಗ್ಯ ಮೊದಲ ಆದ್ಯತೆ. ನಾವು ಮಾಡುವ ಕೆಲಸ ಕಾರ್ಯಗಳು ಸಾರ್ವಜನಿಕರಿಗೆ ಎಷ್ಟು ಉಪಯೋಗವಾಗುತ್ತದೆ ಎಂಬುದು ನಾವು ಮೊದಲು ನೋಡುತ್ತೇವೆ. ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಮೂಲ ಸೌಕರ್ಯಗಳು ಒದಗಿಸುವುದು ನಮ್ಮ ಉದ್ದೇಶ. ಏಕೆಂದರೆ ಈ ದೇಶ ಕಟ್ಟಲು ಯುವಕರು ಪ್ರಮುಖ ಮುಂದಿನ ದಿನಗಳಲ್ಲಿ ಕೃಷಿಗೆ ಹೊತ್ತು ಕೊಡುವುದು ನಮ್ಮ ಗುರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಸುಮಾರು 18 ಅಂಗನವಾಡಿ ಹಾಗೂ 4 ಶಾಲಾ ಕಟ್ಟಡಗಳ ಅಭಿವೃದ್ಧಿ ಕಾರ್ಯಕ್ರಮ ನೆರವೇರಿತು. ಟಾಟಾ ಎಲೆಕ್ರಟಾನಿಕ್ಸ್​ ಕಂಪನಿಯ ಶೋಭಾ ಮತ್ತು ಮಧು ಅವರಿಗೆ ಶಾಲೆಯಿಂದ ಶಾಲಾ ಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಎಸ್​ಡಿಎಮ್​ಸಿ ಅಧ್ಯಕ್ಷ ರಾಮಸ್ವಾಮಿ, ಉಪಾಧ್ಯಕ್ಷ ಅಂಬಿಕಾ ರಾಮು, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಲ್ವ ಮಂಜಲಿ ಶಿವಣ್ಣ, ಮುಖ್ಯ ಶಿಕ್ಷಕ ಫಯಾಜ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net