ಪ್ರೊ. ಅಬ್ದುಲ್ ಕರೀಂ ಪ್ರಶಸ್ತಿ ಪ್ರದಾನ,  ಸನಾ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ

IMG-20250911-WA0011-1.jpg
Published on

ಹುಬ್ಬಳ್ಳಿ: ಸನಾ ಗ್ರುಪ್ ಆಫ್ ಇನ್ ಸ್ಟಿಟ್ಯೂಟ್ ವತಿಯಿಂದ ಪ್ರೊ. ಅಬ್ದುಲ್ ಕರೀಂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಬುಧವಾರ ನಡೆಯಿತು.

ಹುಬ್ಬಳ್ಳಿ ಧಾರವಾಡದ 40ಕ್ಕೂ ಹೆಚ್ಚು ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡಲಾಯಿತು. ನಾಲ್ಕು ಹಿರಿಯ ಶಿಕ್ಷಕರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅತಿಥಿಯಾಗಿದ್ದ ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ, ಕರ್ನಾಟಕ ವಿಶ್ವವಿದ್ಯಾಲಯ ಮಾಜಿ ಸಿಂಡಿಕೇಟ್ ಸದಸ್ಯ ಪ್ರೊ. ಅಬ್ದುಲ್ ಕರೀಂ ಅವರನ್ನು ಸ್ಮರಿಸಿದರು. ಅವರು ಮಹಾನ್ ಪಂಡಿತರು, ತಾತ್ವಿಕ ಬದ್ಧತೆಯುಳ್ಳ ಶಿಕ್ಷಕ, ಸದ್ಗುಣಗಳ ವ್ಯಕ್ತಿತ್ವ ಮತ್ತು ಶಿಕ್ಷಣ, ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹನೀಯರು ಎಂದರು.

ಒಳ್ಳೆಯ ಶಿಕ್ಷಕ ಎಂದರೆ ಪಾಠ ಬೋಧಿಸುವವರಷ್ಟೇ ಅಲ್ಲ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ರೂಪಿಸುವವರೂ ಆಗಿರುತ್ತಾರೆ ಎಂದು ಡಾ. ಅಂಗಡಿ ಹೇಳಿದರು.

ಎ.ಜೆ. ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಮೊಹಮ್ಮದ್ ಅಬ್ದುಲ್ಲಾ ಜಾವೇದ್, ಇಂದಿನ ಭಾರತದಲ್ಲಿ ಬೋಧನೆ ಮತ್ತು ಸವಾಲುಗಳು ಮತ್ತು ಭವಿಷ್ಯದ ದಾರಿ ವಿಷಯದ ಮೇಲೆ ಮಾತನಾಡಿ, ಪರಂಪರೆಯನ್ನು ಆಧುನಿಕತೆಯೊಂದಿಗೆ ಬೆರೆಸುವುದು, ಜ್ಞಾನವನ್ನು ಮೌಲ್ಯಗಳೊಂದಿಗೆ ಹೊಂದಾಣಿಕೆ ಮಾಡುವುದು ಅಗತ್ಯ ಎಂದು ಹೇಳಿದರು.

ಆಂಗ್ಲೊ ಉರ್ದು ಹೈಸ್ಕೂಲ್ ನಿವೃತ್ ಪ್ರಾಂಶುಪಾಲ ಸಾಜಿದಾ ಲಾಲ್ಮಿಯಾ ಮಾತನಾಡಿ, ಸಾಮಾಜಿಕ ಜಾಲತಾಣದ ಯುಗದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ತಂತ್ರಜ್ಞಾನವನ್ನು ಸರಿಯಾಗಿ ಬಳಸುವ ಮಾರ್ಗದರ್ಶನ ನೀಡುತ್ತಾರೆ ಹಾಗೂ ಗೌರವ, ಅನುಕಂಪ ಮತ್ತು ಜವಾಬ್ದಾರಿ ಎಂಬ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುತ್ತಾರೆ ಎಂದು ಹೇಳಿದರು.

ಟ್ರಸ್ಟಿ ತಾರಿಕ್ ಮುಜಾಹಿದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟ್ರಸ್ಟಿ ಸರ್ಫರಾಜ್ ಅತ್ತಾರ್, ಪ್ರಾಂಶುಪಾಲ ಡಾ. ರಾಘವೇಂದ್ರ ಪಟಗೆ, ಡಾ. ಅರಿಫಾ ಮಕಂದರ್, ಶೇಖ್ ಮುಜೀಬ್, ಮಹೇಶ ಗದಗ, ಸಿಬ್ಬಂದಿ ಉಪಸ್ಥಿತರಿದ್ದರು.

ಸನಾ ಎಜ್ಯುಕೇಶನಲ್ ಚಾರಿಟಬಲ್ ಟ್ರಸ್ಟ್‌ನ ಮೊಹಮ್ಮದ್ ಅಯೂಬ್ ಸವಣೂರು ಸ್ವಾಗತಿಸಿದರು. ಪ್ರಿಯಾ ಸಂಸ್ಥೆಯ ಪರಿಚಯ ಮಾಡಿದರು. ಆಡಳಿತಾಧಿಕಾರಿ ಅಂಜುಂ ಖಾನ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net