

ಹುಬ್ಬಳ್ಳಿ : ಇಲ್ಲಿನ ನವನಗರದ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಗುರುವಾರದಂದು ಶಿಕ್ಷಕರ ದಿನ ಆಚರಿಸಲಾಯಿತು.
ಕಾನೂನು ವಿವಿ ಕುಲಸಚಿವರಾದ (ಮೌಲ್ಯಮಾಪನ) ಡಾ. ರತ್ನಾ ಭರಮಗೌಡರ ಮಾತನಾಡಿ, ಶಿಕ್ಷಕರು ಸಮಾಜದ ಅಡಿಪಾಯ. ಒಳ್ಳೆಯ ಶಿಕ್ಷಕ ತಾನು ಕಲಿಯುವುದರೊಂದಿಗೆ ವಿದ್ಯಾರ್ಥಿಗಳಿಗೂ ಶಿಕ್ಷಣ ಕಲಿಸುತ್ತಾನೆ. ರಾಷ್ಟ್ರದ ಭದ್ರತೆಯು ಶಿಕ್ಷಣ ಸಂಸ್ಥೆಯ ಕೊಠಡಿಯಲ್ಲಿ ನಿರ್ವಿುತವಾಗುತ್ತದೆ ಎಂದು ಹೇಳಿದರು.
ಹಿರಿಯ ಪ್ರಾಧ್ಯಾಪಕ ಪ್ರೊ. ಜಿ.ಬಿ. ಪಾಟೀಲ ಮಾತನಾಡಿ, ಮುಂದೆ ಗುರಿ ಹಿಂದೆ ಗುರು ಇದ್ದವನು ಇಡೀ ಜಗತ್ತನ್ನೇ ಬದಲಾಯಿಸುವ ಸತ್ಪ್ರಜೆಯಾಗಬಲ್ಲ. ದಯೆ, ಹೊಂದಿಕೊಳ್ಳುವ ಮನೋಭಾವನೆ, ಸಮಯ ಪ್ರಜ್ಞೆ, ಪ್ರಮಾಣಿಕತೆ ಮತ್ತು ಧೈರ್ಯ ಇವುಗಳು ಒಬ್ಬ ಉತ್ತಮ ಶಿಕ್ಷಕನ ಗುಣಗಳು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ವಿದ್ಯಾರ್ಥಿಗಳ ಏಳಿಗೆ, ಹಿತ ಮತ್ತು ಇಡೀ ಭವಿಷ್ಯೕ ಒಬ್ಬ ಶಿಕ್ಷಕನ ಕೈಯಲ್ಲಿರುತ್ತದೆ. ಗುರುವು ವಿದ್ಯಾರ್ಥಿಯ ಬದುಕಿನ ಆಧಾರ ಸ್ತಂಭ. ಮೌಲ್ಯಯುತ ಹಾಗೂ ಮಾನವೀಯ ಗುಣಗಳನ್ನು ಶಿಕ್ಷಕನಾದವನು ಬೆಳಸಿಕೊಂಡು ಅವುಗಳಡಿಯಲ್ಲಿ ಶಿಕ್ಷಣವನ್ನು ಬೋಧಿಸಿದ್ದೇ ಆದರೆ, ಉತ್ತಮ ಸಮಾಜದೊಂದಿಗೆ ಭವ್ಯವಾದ ರಾಷ್ಟ್ರ ಕಟ್ಟಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಿಂಡಿಕೇಟ್ ಸದಸ್ಯ ವಸಂತ ಲದವಾ, ಆಡಳಿತಾಂಗ ಕುಲಸಚಿವರಾದ ಅನುರಾಧ ವಸ್ತ್ರದ ಹಾಗೂ ಇತರರು ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕ ಡಾ. ಭೀಮಾಬಾಯಿ ಮೂಲಗೆ ನಿರೂಪಿಸಿದರು. ಡಾ. ಪಾರ್ವತಿ ಎಂ. ವಂದಿಸಿದರು.