

ಕೋಟ: ವಿವೇಕ ಪದವಿ ಪೂರ್ವ ಕಾಲೇಜಿನ ಹಳೇ ವಿದ್ಯಾರ್ಥಿ ಸಂದ ವತಿಯಿಂದ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶುಭಾಶಯ ಸಲ್ಲಿಸಲಾಯಿತು. ಸಂದ ಉಪಾಧ್ಯಕ್ಷ ಎಸ್.ನಾಗೇಶ ಶಾನುಭೋಗ ಸವಾರಂಭದ ಅಧ್ಯಕ್ಷತೆ ವಹಿಸಿದ್ದರು.
ಪ್ರೌಢಶಾಲೆ ಮುಖ್ಯಶಿಕ್ಷಕ ವೆಂಕಟೇಶ ಉಡುಪ, ವಾಜಿ ಅಧ್ಯಕ್ಷರಾದ ಎಚ್.ವಿ.ಸೋಮಯಾಜಿ, ಕೆ.ತಾರಾನಾಥ ಹೊಳ್ಳ, ಕಾರ್ಯದರ್ಶಿ ಪಿ.ಸುಧಾಕರ್, ಜಿ.ಸುರೇಶ್, ಪಿ.ಶ್ರೀಪತಿ ಹೇರ್ಳೆ, ಮಂಜುನಾಥ ಉಪಾಧ್ಯ, ಆಂಗ್ಲ ವಾಧ್ಯಮ ಶಾಲೆ ಮುಖ್ಯಶಿಕ್ಷಕರಾದ ಪ್ರೀತಿರೇಖಾ, ಜನಾರ್ದನ ಹಂದೆ, ಉಮೇಶ ಉಡುಪ, ವೆಂಕಟೇಶ ಭಟ್ಟ ಉಪಸ್ಥಿತರಿದ್ದರು. ಸಂದ ಗೌರವಾಧ್ಯಕ್ಷ, ಪ್ರಾಂಶುಪಾಲ ಕೆ.ಜಗದೀಶ ನಾವಡ ಸ್ವಾಗತಿಸಿದರು. ಹಿರಿಯ ಸಹಶಿಕ್ಷಕರಾದ ಗೌರವ ಉಪಾಧ್ಯಕ್ಷ ಪ್ರೇವಾನಂದ್ ವಂದಿಸಿದರು.