ಸೆ.6 ರಂದು ರುಪ್ಸಾದಿಂದ ಶಿಕ್ಷಕರ ದಿನಾಚರಣೆ

SANGAMESH
SANGAMESH
Published on

ರಾಯಚೂರು ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ತಾಲೂಕ ಘಟಕದಿಂದ ಸೆ.6 ರಂದು ಬೆಳಗ್ಗೆ 10 ಗಂಟೆಗೆ ಶಿಕ್ಷಕರ ದಿನಾಚರಣೆ ನಿಮಿತ್ತ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಗರದ ಯರಮರಸ್ ಕ್ಯಾಂಪಿನ ಅಫ್ ತಾಬ್ ಶಾದಿಮಹಲ್‌ನಲ್ಲಿ ಆಯೋಜಿಸಲಾಗಿದೆಂದು ಸಂಘಟನೆ ರಾಜ್ಯ ಸಂಚಾಲಕ ಸಂಗಮೇಶ ಮಂಗಾಣ್ಣನವರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸಲಿದ್ದಾರೆ.ಸಂಸದ ಜಿ.ಕುಮಾರ ನಾಯಕ, ಶಾಸಕರಾದ ಬಸನಗೌಡ ದದ್ದಲ್, ಡಾ.ಶಿವರಾಜ ಪಾಟೀಲ್, ಎ.ವಸಂತಕುಮಾರ ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಆರ್‌ಡಿಎ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಸಾಜೀದ ಸಮೀರ್, ಪಾಲಿಕೆ ಸದಸ್ಯ ಸಣ್ಣ ನರಸರೆಡ್ಡಿ, ಮಾಜಿ ಸದಸ್ಯ ಶಂಶಾಲಂ, ರುಪ್ಪಾ ಗೌರವಾಧ್ಯಕ್ಷ ಸೈಯದ್ ಸಿರಾಜ್ ಹುಸೇನ್ ಆಗಮಿಸಲಿದ್ದಾರೆ.

ಅಧ್ಯಕ್ಷತೆಯನ್ನು ರುಪ್ಪಾ ಜಿಲ್ಲಾಧ್ಯಕ್ಷ ಜಂಗ್ಲಪ್ಪಗೌಡ ವಹಿಸಿಲಿದ್ದರೆ. ಅತಿಥಿಗಲಾಗಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಡಿ.ಬಡಿಗೇರ, ಡಯಟ್ ಕಾಲೇಜಿನ ಪ್ರಾಚಾರ್ಯ ಚಂದ್ರಶೇಖರ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಈರಣ್ಣ ಕೋಸಗಿ, ಸಂಗಮೇಶ ಮಂಗಣ್ಣನವರು ಸೇರಿ ಅನೇಕರು ಆಗಮಿಸಲಿದ್ದಾರೆ. ಒಟ್ಟು 43 ಜನ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಯಾ ಶಾಲಾ ಆಡಳಿತ ಮಂಂಡಳಿಯ ನೀಡುವ ಸಾವಿರ ನಗದು ಬಹುಮಾನವನ್ನು ಶಾಲೆ ಶಿಕ್ಷಕರಿಗೆ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಂಗ್ಲೆಪ್ಪಗೌಡ, ಗೋವಿಂದ, ಜನಾರ್ಧನ, ನರಸಿಂಹಲು, ಪ್ರಶಾಂತ, ಆಸೀಪ್, ಸೈಯದ್ ಮಸ್ತಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net