

ಕೋಟ: ರೋಟರಿ ಕ್ಲಬ್ ಕೋಟ ಸಿಟಿ, ಆ್ಯನ್ಸ್ ಕ್ಲಬ್ ಕೋಟ ಸಿಟಿ ವತಿಯಿಂದ ಕ್ಲಬ್ ಸದಸ್ಯ ಸತೀಶ್ ಪೂಜಾರಿ ಅವರ ಮನೆ ಆವರಣದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಆ್ಯನ್ಸ್ ಕ್ಲಬ್ ಸದಸ್ಯರು ಹಾಗೂ ಶಿಕ್ಷಕಿಯರಾದ ಸುನೀತಾ ಸಿ.ಮೆಂಡನ್, ದೀಪಾರಾಣಿ ಶೆಟ್ಟಿ, ಜ್ಯೋತಿ ನಿತ್ಯಾನಂದ ನಾಯರಿ, ರೂಪಶ್ರೀ ಕೆ., ಸಂಧ್ಯಾ ಪ್ರಕಾಶ್ ಪೂಜಾರಿ, ಮಮತ ಕೃಷ್ಣ, ನಂದಿನಿ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಕ್ಲಬ್ ಕೋಟ ಸಿಟಿ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಅಸಿಸ್ಟೆಂಟ್ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ಮಾಜಿ ಅಸಿಸ್ಟೆಂಟ್ ಗವರ್ನರ್ ಚಂದ್ರಶೇಖರ ಮೆಂಡನ್, ಕಾರ್ಯದರ್ಶಿ ಕೃಷ್ಣ ಪೂಜಾರಿ ಪಿ., ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಶಶಿಕಲಾ ಗಣೇಶ್, ಆ್ಯನ್ಸ್ ಕ್ಲಬ್ ವ್ಯವಸ್ಥಾಪಕ ಡಾ.ಗಣೇಶ್ ಯು., ಕಾರ್ಯದರ್ಶಿ ಶಾರದಾ ಸತೀಶ್ ಪೂಜಾರಿ, ರೋಟರಿ ಕೋಟ ಸಿಟಿ ಮತ್ತು ಆ್ಯನ್ಸ್ ಕ್ಲಬ್ ಕೋಟ ಸಿಟಿ ಸದಸ್ಯರು ಉಪಸ್ಥಿತರಿದ್ದರು.