

ಹುಬ್ಬಳ್ಳಿ : ಶಿಕ್ಷಣ ತಜ್ಞರಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಅಂಗವಾಗಿ ಇಲ್ಲಿನ ಭವಾನಿ ನಗರದ ಶ್ರೀಮತಿ ವಿಮಲಾ ಕುಲಕರ್ಣಿ ಮೆಮೋರಿಯಲ್ ಶಾಲೆಯಲ್ಲಿ ಶುಕ್ರವಾರದಂದು ಶಿಕ್ಷಕರ ದಿನ ಆಚರಿಸಲಾಯಿತು.
ಶಾಲೆಯ ಆಡಳಿತ ಮಂಡಳಿ ಸದಸ್ಯ ಶ್ರೀರಂಗ ಹನುಮಸಾಗರ ಮಾತನಾಡಿ, ಶಿಕ್ಷಕ ವೃತ್ತಿ ಜಗತ್ತಿನಲ್ಲೆ ಶ್ರೇಷ್ಠವಾಗಿರುವ ವೃತ್ತಿ. ಈ ಶ್ರೇಷ್ಠತೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ ಎಂದರು.
ಶಿಕ್ಷಕಿ ಮಮತಾ ಆರ್.ಕೆ. ಅತಿಥಿಯಾಗಿದ್ದರು. ಆಡಳಿತ ಮಂಡಳಿಯ ಕಾರ್ಯದರ್ಶಿ ಕನಕವೀಡು ಸೇತುಮಾಧವರಾವ್, ಖಜಾಂಚಿ ಕನಕಗಿರಿ ರಘೊತ್ತಮರಾವ್, ಸದಸ್ಯ ಕಿರಣ ಅಡವಿ, ಪ್ರಾಂಶುಪಾಲ ಎಂ.ಕೆ.ಹಿರೇಮಠ, ಮುಖ್ಯೋಪಾಧ್ಯಾಯ ಅನಿತಾ ಬಾಗಲಕೋಟ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳಾದ ಅನನ್ಯ ಮತ್ತು ಸಿಂಚನಾ ಸ್ವಾಗತಿಸಿದರು. ದೀಪ್ತಾ ಧೋಂಗಡಿ ವಂದಿಸಿದರು.