

ಬೆಳ್ತಂಗಡಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ವಿದ್ವತ್ ಪಿ.ಯು. ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಿದ್ಯಾರ್ಥಿಗಳಾದ ಕೀರ್ತನ್ ಹಾಗೂ ಸೃಷ್ಟಿ ಅನಿಸಿಕೆ ಹಂಚಿಕೊಂಡರು. ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಶೈಕ್ಷಣಿಕ ನಿರ್ದೇಶಕ ಗಂಗಾಧರ ಮಂಡಗಳಲೆ ಶುಭಹಾರೈಸಿದರು.
ಕರುನಾಡ ಕನ್ನಡ ಕಲಾಸಿರಿ ಬಳಗದ ವತಿಯಿಂದ ನೀಡುವ ‘2025ನೇ ಸಾಲಿನ ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ’ಗೆ ಭಾಜನರಾಗಿರುವ ವಿದ್ವತ್ ಕಾಲೇಜಿನ ಕನ್ನಡ ಉಪನ್ಯಾಸಕ ನೀಲಕಂಠ ಅವರನ್ನು ಗೌರವಿಸಲಾಯಿತು. ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪ್ರಜ್ವಲ್ ರೈ, ಆಡಳಿತ ಅಧಿಕಾರಿ ಅಶೋಕ್ ಕುಮಾರ್ ಶೆಟ್ಟಿ, ಪ್ರಾಂಶುಪಾಲ ಹರೀಶ್ ಕೆ.ಆರ್. ಮೊದಲಾದವರಿದ್ದರು.
ಸಮ್ಯಕ್ ತೇಜಸ್ವಿ ಮತ್ತು ಚಂದನಾ ಅಗ್ನಿಹೋತ್ರಿ ನಿರೂಪಿಸಿದರು.