ಬಲಿಷ್ಠ ರಾಷ್ಟ್ರ ನಿರ್ವಾಣದಲ್ಲಿ ಶಿಕ್ಷಕರ ಪಾತ್ರ ಹಿರಿದು : ಜಯರಾಮ್ ಆಳ್ವ ಪೋಡಾರು ಅಭಿಮತ

teacher
Published on

ಉಳ್ಳಾಲ: ಸದೃಢ ಸವಾಜ ಮತ್ತು ಬಲಿಷ್ಠ ರಾಷ್ಟ್ರ ನಿರ್ವಾಣಕ್ಕೆ ಶಿಕ್ಷಕರ ಕೊಡುಗೆ ಅತಿಮುಖ್ಯ ಎಂದು ಪಾವೂರು ಹರೇಕಳ ತ್ರಿಶಕ್ತಿ ವಿದ್ಯಾವರ್ಧಕ ಸಂದ ಕೋಶಾಧಿಕಾರಿ ಜಯರಾಮ್ ಆಳ್ವ ಪೋಡಾರು ಅಭಿಪ್ರಾಯಪಟ್ಟರು.

ಶ್ರೀರಾಮಕಷ್ಣ ಪ್ರೌಢಶಾಲೆ ಶಿಕ್ಷಕರಕ್ಷಕ ಸಂದ ವತಿಯಿಂದ ಬುಧವಾರ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ವಾತನಾಡಿದರು.

ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯ ವಾತ್ರ ಬೋಧಿಸದೆ ನೈತಿಕ ಶಿಕ್ಷಣ ಕೂಡ ಹೇಳಿ ಕೊಡಬೇಕು ಎಂದರು.

ಶಾಲಾಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ರಾಜಕುವಾರ್ ಶೆಟ್ಟಿ ಮಂಚವುದಡಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಕ್ಷಕ ಸಂದ ಅಧ್ಯಕ್ಷೆ ಲೊಲಿಟ, ಉಪಾಧ್ಯಕ್ಷ ಅಬ್ದುಲ್ ರಹಿವಾನ್, ಶಾಲಾ ಮುಖ್ಯಶಿಕ್ಷಕಿ ಉಷಾಲತ, ಶಿಕ್ಷಕರಾದ ಮೋಹಿನಿ, ತ್ಯಾಗಮ್ ಹರೇಕಳ, ಶಿಕ್ಷಕ- ರಕ್ಷಕ ಸಂದ ಪದಾಧಿಕಾರಿಗಳಾದ ಜೀನತ್, ರೇಖಾ, ಪ್ರೇಮಾ, ವೀಣಾ, ದಯಾವತಿ, ಶಿಕ್ಷಕರಾದ ಕುಮುದಾ, ರವಿಶಂಕರ್, ಕೃಷ್ಣ ಶಾಸ್ತ್ರಿ, ಸ್ಮಿತಾ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿ ನಾಯಕಿ ಲಾವಣ್ಯಾ ಸ್ವಾಗತಿಸಿದರು. ಶಿಕ್ಷಕ ಶಿವಣ್ಣ ವಂದಿಸಿದರು.

ಶಾಲಾ ಸಾಂಸ್ಕೃತಿಕ ಮಂತ್ರಿ ದೀಕ್ಷಿತಾ ನೇತತ್ವದಲ್ಲಿ ನತ್ಯ, ಕಿರು ನಾಟಕ ಪ್ರದರ್ಶನ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net