ಶಿರೂರ ಬಾಳನಗೌಡ್ರ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Teacher's Day in Shirur
Published on

ನವಲಗುಂದ: ತಾಲೂಕಿನ ಶಿರೂರ ಗ್ರಾಮದ ಎನ್.ಜಿ. ಬಾಳನಗೌಡ್ರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ನ್ಯಾಯವಾದಿ ಎಸ್.ಎಂ. ಹಿರೇಮಠ ಮಾತನಾಡಿ, ಮಾದಕ ವಸ್ತುಗಳ ಹಾನಿ ಕುರಿತು ಮತ್ತು ಅದಕ್ಕಿರುವ ಕಾನೂನು ನಿರ್ಬಂಧಗಳನ್ನು ವಿವರಿಸಿದರು.

ಗುತ್ತಿ ಬಸವೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಶಿಕ್ಷಕಿ ಡಾ. ಭಾಗ್ಯಜ್ಯೋತಿ ಕೋಟಿಮಠ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭೂ ದಾನಿಗಳಾದ ಶಂಕರ ಗೌಡ ಬಾಳನ ಗೌಡ್ರ, ಕಲ್ಲನಗೌಡ ರಾಯನ ಗೌಡ್ರ, ಬನಪ್ಪ ಗೌಡ ಗೌಡ್ರ, ಶಿವಾಜಿ ದುರಣ್ಣವರ, ಪವಾಡಿ ಗೌಡ್ರು, ಶಿಕ್ಷಕರಾದ ಪ್ರಭುಲಿಂಗ ನರೇಗಲ್ಲ, ಪ್ರೀತಿ ನಾಯ್ಕ, ಶ್ರೀಕಾಂತಗೌಡ ಗೌಡ್ರ, ಶಿವಾನಂದ ನಾಗೂರ, ಸಿದ್ದು ಮಾದರ, ಲಲಿತಾಕ್ಷಿ ಯಮನಾಳ, ಶ್ರೀದೇವಿ ಕಾಳ, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net