ದರಬಾರ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನ ಆಚರಣೆ

Teachers' Day celebration at Darbara Educational Institute
Published on

ವಿಜಯಪುರ : ಮಕ್ಕಳ ಮನಸ್ಸು ಕೋಮಲ. ಅವರ ಭಾವನೆಗೆ ಸ್ಪಂದಿಸಿ ಅಕ್ಷರಭ್ಯಾಸವನ್ನು ಮಾಡಿಸುವ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಶಿಕ್ಷಕರಾದ ನಾವು ಬೆಳೆಸಿಕೊಳ್ಳಬೇಕು ಎಂದು ಶಿಕ್ಷಕಿ ಎಲ್​.ಎನ್​. ಉಡುಪಿ ತಿಳಿಸಿದರು.ನಗರದ ದರಬಾರ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾವರ್ಧಕ ಸಂದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಡಾ. ಸರ್ವೇಪಲ್ಲಿ ರಾಧಾಕೃಷ್ಣನ್​ ಅವರು ಆದರ್ಶ ಶಿಕ್ಷಕರಾಗಿ ತತ್ವಜ್ಞಾನಿಯಾಗಿ ಮನದ ಅಜ್ಞಾನದ ಕತ್ತಲೆ ಕಳೆದು ವಿದ್ಯಾರ್ಥಿಗಳ ಬದುಕಿಗೆ ಸುಜ್ಞಾನದ ಬೆಳಕು ಬೀರಿದ ಅದ್ಭುತ ಶಕ್ತಿ. ಅಲ್ಲದೆ, ಗುರು ಶಿಷ್ಯ ಸಂಬಂಧದ ಭವ್ಯ ಪರಂಪರೆ ಅರಿತು ಅತ್ಯುತ್ತಮ ಸಂಸತಿ ಮತ್ತು ಸಂಸ್ಕಾರ ನೀಡಿ ಶಿಷ್ಯ ಬಳಗವನ್ನು ಸೃಷ್ಟಿಸಿದ ದಾರ್ಶನಿಕರಾಗಿದ್ದರು ಎಂದು ಹೇಳಿದರು.

ವಿದ್ಯಾರ್ಥಿಗಳು ಡಾ. ಸರ್ವೇಪಲ್ಲಿ ರಾಧಾಕೃಷ್ಣನ್​ ಚಿತ್ರ ಬಿಡಿಸಿ ಅವರ ತತ್ವಾದರ್ಶಗಳ ಸಂದೇಶಗಳನ್ನು ಓದಿದರು. ಮುಖ್ಯ ಗುರು ರಮೇಶ ಕೋಟ್ಯಾಳ ಮತ್ತಿತರರಿದ್ದರು.

ವಿಜಯಪುರದ ವಿದ್ಯಾವರ್ಧಕ ಸಂದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು. ಎಲ್​.ಎನ್​. ಉಡುಪಿ, ರಮೇಶ ಕೋಟ್ಯಾಳ ವಿದ್ಯಾರ್ಥಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net