ಮಹಾಪುರುಷರ ಆತ್ಮಚರಿತ್ರೆ ಅಧ್ಯಯನ ಮಾಡಿ

6 Dwd 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಜ್ಞಾನ ಮತ್ತು ಬುದ್ಧಿಮತ್ತೆ ಜಾಗತಿಕ ಮನ್ನಣೆ ಹೊಂದಿವೆ. ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಈ ಎರಡನ್ನೂ ಸಂಪಾದಿಸಿದ್ದರು. ಮಹಾಪುರುಷರ ಆತ್ಮಚರಿತ್ರೆಗಳನ್ನು ಅಧ್ಯಯನ ಮಾಡಿ ಅವರಂತೆ ಆಗುವ ಕನಸು ಕಾಣಬೇಕು ಎಂದು ಕ್ಲಾಸಿಕ್ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಲಹೆಗಾರ ಡಾ. ಎಂ.ವೈ. ಸಾವಂತ ಹೇಳಿದರು.

ನಗರದ ಕ್ಲಾಸಿಕ್ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಜಿ. ಹಿರೇಮಠ ಮತ್ತು ಪ್ರೊ. ಸಚ್ಚಿದಾನಂದ ಉಪ್ಪಾರ ಮಾತನಾಡಿದರು. ಭಾಗ್ಯಶ್ರೀ ಸ್ವಾಗತಿಸಿದರು. ರಮೇಶ ಬಿ.ಎ. ನಿರೂಪಿಸಿದರು. ಮಹೇಂದ್ರ ವಂದಿಸಿದರು.

ಮಹಾವಿದ್ಯಾಲಯದ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿ- ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net