

ಹುಬ್ಬಳ್ಳಿ: ನವನಗರದ ಭಗಿನಿ ನಿವೇದಿತಾ ವಿದ್ಯಾಲಯದಲ್ಲಿ ಶಿಕ್ಷಕರಿಗೆ ವಿನೂತನ ಆಟಗಳನ್ನು ಆಡಿಸುವ ಮೂಲಕ ಶಿಕ್ಷಕರ ದಿನ ಆಚರಿಸಲಾಯಿತು.
ಅತಿಥಿಯಾಗಿದ್ದ ಜಿ.ಜಿ. ಹೆಗಡೆ ಮಾತನಾಡಿ, ಶಿಕ್ಷಕರನ್ನು ಗೌರವಿಸುವಂತೆ ಸಲಹೆ ನೀಡಿದರು. ತಮಗೆ ಪಾಠ ಮಾಡಿದ ಶಿಕ್ಷಕರನ್ನು ಸ್ಮರಿಸಿಕೊಂಡರು. </p><p>ಕರವೀರಪ್ಪ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಬಿ.ಟಿ. ಪೋಳ, ಸ್ಮೀತಾ ಕುಲಕರ್ಣಿ, ಶ್ರೀಧರ ಲಕ್ಷೆ್ಮೕಶ್ವರ ಅತಿಥಿಗಳಾಗಿದ್ದರು.
ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾಜು ಹೈಬತ್ತಿ, ಸಹ ಮುಖ್ಯೋಧ್ಯಾಪಕಿ ದೀಪಾ ಚವಟೆ, ಪ್ರಾಥಮಿಕ ಶಾಲಾ ಮುಖ್ಯೋಧ್ಯಾಪಕಿ ಕಲಾವತಿ ಜೀರಿಗಿವಾಡ ಹಾಗೂ ಇತರರು ಉಪಸ್ಥಿತರಿದ್ದರು. ಮಧುಮತಿ ತೋರತ್ತನವರ ಸ್ವಾಗತಿಸಿ, ಪರಿಚಯಿಸಿದರು. ಭುವನೇಶ್ವರಿ ಬಡಿಗೇರ ನಿರೂಪಿಸಿದರು. ವೈಷ್ಣವಿ ಹಡಪದ ವಂದಿಸಿದರು.