ನೆಲ್ಯಾಡಿ ಬೆಥನಿ ಪಿಯು ಕಾಲೇಜಲ್ಲಿ ಶಿಕ್ಷಕರ ದಿನಾಚರಣೆ

New Project (26)
Published on

ನೆಲ್ಯಾಡಿ: ನೆಲ್ಯಾಡಿಯ ಬೆಥನಿ ಪಿಯು ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ, ಶಿಕ್ಷಕರ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭ ಶನಿವಾರ ನಡೆಯಿತು.

25 ವರ್ಷಗಳಿಂದ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರಾದ ರಾಜಮ್ಮ, ಪುಷ್ಪಾವತಿ ಹಾಗೂ ಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಸುನೀಲ್ ಅವರನ್ನು ಸನ್ಮಾನಿಸಲಾಯಿತು.

ಪ್ರಾಂಶುಪಾಲ ಡಾ.ವರ್ಗಿಸ್ ಕೈಪನಡ್ಕ ಮಾತನಾಡಿದರು. ಫಾ.ಜೈಸನ್, ಬರ್ಸರ್ ಜಾರ್ಜ್ ಸ್ಯಾಮುವೆಲ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ.ಎಸ್., ಜೇಮ್ಸ್, ಉಪಪ್ರಾಂಶುಪಾಲ ಜೋಸ್ ಎಂ.ಜೆ., ಮುಖ್ಯಶಿಕ್ಷಕ ಜಾರ್ಜ್, ಪ್ರಕಾಶ್, ಎಚ್‌ಒಡಿ ಸುಶೀಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಬೀಳ್ಕೊಡುಗೆ: ಬೆಥನಿ ವಿದ್ಯಾಸಂಸ್ಥೆಯಲ್ಲಿ ಸಂಚಾಲಕರಾಗಿ, ಬರ್ಸರ್ ಆಗಿ ಸೇವೆ ಸಲ್ಲಿಸಿದ್ದ ಫಾ.ಜೈಸನ್ ಸೈಮನ್ ಅವರನ್ನು ಪಿಟಿಎ ಮತ್ತು ಶಾಲಾ ಆಡಳಿತ ಮಂಡಳಿಯಿಂದ ಗೌರವಿಸಿ ಬೀಳ್ಕೊಡಲಾಯಿತು. ಶಿಕ್ಷಕರ ರಕ್ಷಕ ಸಂಘ ಅಧ್ಯಕ್ಷ ಸನ್ನಿ ಕೆ.ಎಸ್., ಉಪಾಧ್ಯಕ್ಷ ಸುಧೀರ್ ಕುಮಾರ್, ಜತೆ ಕಾರ್ಯದರ್ಶಿ ಸ್ಟೇಫಿ, ಪ್ರೆಸ್ಸಿ, ಪ್ರಿಯಾ ಉಪಸ್ಥಿತರಿದ್ದರು. ರಮ್ಯಾ ಚಂದ್ರನ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net