

ಹುಬ್ಬಳ್ಳಿ: ರಾಯಾಪುರದ ಎಸ್ಜೆಎಂವಿ ಮಹಾಂತ ಮಹಾವಿದ್ಯಾಲಯದಲ್ಲಿ ಮಂಗಳವಾರ ಶಿಕ್ಷಕರ ದಿನ ಆಚರಿಸಲಾಯಿತು.
ಪ್ರಾಚಾರ್ಯ ಡಾ. ಶಾಂತಯ್ಯ ಕೆ.ಎಸ್. ಮಾತನಾಡಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಂಥ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ವನ್ನು ವಿದ್ಯಾರ್ಥಿಗಳಿಂದು ತಿಳಿದುಕೊಳ್ಳಲೇಬೇಕಾದ ಅವಶ್ಯಕತೆ ಇದೆ. ಅವರ ಆದರ್ಶಗಳು ಎಲ್ಲರಿಗೂ ಅನುಕರಣೀಯ. ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷೆ ಜಿ.ಸಿ. ಕಡ್ಡಿಪುಡಿ, ಎಂ.ಬಿ ಅಳಗವಾಡಿ, ಡಾ. ಪುಷ್ಪಾ ಬಸನಗೌಡರ, ಡಾ. ಎಸ್.ಎಸ್. ತಡಹಾಳ, ಶ್ರೀದೇವಿ ಬೆಣ್ಣಿ, ಸುಮಂಗಲ ಚಿಗರಿಮಠ, ಪಿ.ಎಸ್. ಹಿರೇಮಠ, ಅನಿಲ ಕಾಡಣ್ಣವರ್, ಗಿರೀಶ ಪಾಟೀಲ, ಇತರರು ಇದ್ದರು.