

ಕುಂಬಳೆ: ಸೂರಂಬೈಲು ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕ ದಿನ ಆಚರಿಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಬಾಬು ಪಿ. ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸೂರಂಬೈಲು ಶಾಲೆಯಲ್ಲಿ ಕಲಿತು, ಅಲ್ಲೇ ಶಿಕ್ಷಕರಾಗಿ ಬಳಿಕ ಮುಖ್ಯಶಿಕ್ಷಕರಾಗಿ ನಿವೃತ್ತರಾದ ಗಿರಿಜಾನಾಥ ಕೆ. ಅವರನ್ನು ಗೌರವಿಸಲಾಯಿತು.
ಸಹ ಶಿಕ್ಷಕ ಕಿರಣ್ ಕೆ, ಶಿಕ್ಷಕರಾದ ಗೀತಾ ಕೆ, ಪ್ರಸನ್ನ ಕುಮಾರಿ ಎ, ಸಾವಿತ್ರಿ ಬಿ, ಸೌದತ್ ಕೆ.ಪಿ. ಅವರನ್ನು ಸನ್ಮಾನಿಸಲಾಯಿತು. ನೌಕರ ಸಂಘದ ಕಾರ್ಯದರ್ಶಿ ಕಿರಣ್ ಕೆ, ಪ್ರಸನ್ನ ಕುಮಾರಿ ಎ, ಲಾರೆಟ್, ಮೊಹಮ್ಮದ್ ಮುನ್ಸೀರ್ ದರ್ಬಾರ್ ಕಟ್ಟೆ, ಸ್ಮಿತ ವಿ.ಮುಳಿಯಡ್ಕ ಶುಭಾಶಂಸನೆಗೈದರು. ಮುಖ್ಯ ಶಿಕ್ಷಕಿ ಸುನೀತ ಎ. ಸ್ವಾಗತಿಸಿದರು. ಗೀತ ಕೆ. ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.