

ಹುಬ್ಬಳ್ಳಿ: ಇಲ್ಲಿಯ ಶಬರಿನಗರ ಎಸ್ಎಸ್ಕೆ ಕಲ್ಯಾಣ ಮಂಟಪದಲ್ಲಿ ತಾಲೂಕ ಮಟ್ಟದ ಶಿಕ್ಷಕರ ದಿನವನ್ನು ಗುರುವಾರ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಧಾರವಾಡ ಐಐಟಿ ಡೀನ್ ಪ್ರೊ. ಶಿವಪ್ರಸಾದ ಅವರು ಮಾತನಾಡಿ, ವರ್ಗ ಕೋಣೆಯಲ್ಲಿ ಶಿಕ್ಷಕರು ಪಾಠ ಮಾಡುವ ಮುನ್ನ ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳುವುದು ತುಂಬಾ ಅಗತ್ಯ. ಇದರಿಂದ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಬಹುದು ಎಂದರು.
ಹುಡಾ ಅಧ್ಯಕ್ಷ ಶಾಕೀರ್ ಸನದಿ, ಮೇಯರ್ ರಾಮಣ್ಣ ಬಡಿಗೇರ್ ಮಾತನಾಡಿ, ಗುರು ಶಿಷ್ಯರ ಸಂಬಂಧ ಶಾಶ್ವತವಾದದ್ದು, ವಿದ್ಯಾರ್ಥಿ ಜೀವನವು ಪ್ರತಿಯೊಬ್ಬರ ಬದುಕಿನಲ್ಲಿ ಮರೆಯಲಾರದ ಕ್ಷಣಗಳು ಎಂದರು.
ರೋಟರಿ ಕ್ಲಬ್‌ನ ರೀಟಾ ಹಂಡಾ ಅವರು ಶಿಕ್ಷಕರ ಮನೋವೃತ್ತಿಗಳು ಕುರಿತು ಮಾತನಾಡಿದರು.
ಶಾಸಕ ಮಹೇಶ ಟೆಂಗಿನಕಾಯಿ, ನಿವೃತ್ತ ಶಿಕ್ಷಕರಿಗೆ ಮತ್ತು ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
65 ನಿವೃತ್ತ ಶಿಕ್ಷಕರಿಗೆ ಸನ್ಮಾನ ಮತ್ತು 20 ಉತ್ತಮ ಶಾಲೆಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಧಾಕೃಷ್ಣನ್ ಅವರ ಹಾಗೂ ಸಾವಿತ್ರಿಬಾಯಿ ಪುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಬ್ಯಾಂಕ್ ಆಫ್ ಬರೋಡ ಮತ್ತು ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ಅವರು ಶಿಕ್ಷಕರಿಗಾಗಿ ಬ್ಯಾಂಕಿನ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು.
ಸಮಾಜ ಸೇವಕ ರಮೇಶ ಮಹದೇವಪ್ಪನವರ, ಪ್ರಾಥಮಿಕ, ಪ್ರೌಢ ಶಾಲೆ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪಾಲಿಕೆ ಸದಸ್ಯ ನರಗುಂದ, ಕೆಎಂಎಫ್ ನಿರ್ದೇಶಕ ಬಣವಿ, ಚುಳಕಿ, ಹುಬ್ಬಳ್ಳಿ, ಮುನವಳ್ಳಿ, ಶಿವಳ್ಳಿಮಠ, ಕುಂಬಾರ, ಹೊಸಮನಿ, ಬಂಗಾರಿಮಠ, ಮನಿಯಾರ ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬಮ್ಮಕ್ಕನವರ ಸ್ವಾಗತಿಸಿದರು. ಜಡಿಮಠ ಕಾರ್ಯಕ್ರಮ ನಿರೂಪಿಸಿದರು. ಬಿಆರ್ಸಿ ಸಮನ್ವಯ ಅಧಿಕಾರಿ ಸಂತೋಷ್ ದಂಡಗಲ್ ವಂದಿಸಿದರು.