ಎಲ್ಲರ ವ್ಯಕ್ತಿತ್ವ ರೂಪಿಸುವ ಶಕ್ತಿ ಶಿಕ್ಷಕರಿಗೆ ಇದೆ

jlr
Published on

ಜಗಳೂರು: ಪ್ರತಿಯೊಬ್ಬರ ವ್ಯಕ್ತಿತ್ವ ರೂಪಿಸುವ ಶಕ್ತಿ ಇರುವುದು ಶಿಕ್ಷಕರಿಗೆ ಮಾತ್ರ ಎಂದು ಸಂಸ್ಥೆ ಕಾರ್ಯದರ್ಶಿ ಕೆ.ಆರ್. ತಿಪ್ಪೇಸ್ವಾಮಿ ಹೇಳಿದರು.

ತಾಲೂಕಿನ ಹಿರೇಮಲ್ಲನಹೊಳೆ ಎಸ್‌ಕೆಒಎಸ್‌ಟಿ ಮೆಮೋರಿಯಲ್ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ 136ನೇ ಜಯಂತಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಶಿಕ್ಷಕರು ಪಾಠದ ಮೂಲಕ ಮಾರ್ಗದರ್ಶನ ತೋರುವ ಜ್ಞಾನದ ಬೆಳಕಿನಂತೆ. ಜೀವನಕ್ಕೊಂದು ದಾರಿ ತೋರಿದ ಶಿಕ್ಷಕರಿಗೆ ಋಣಿಯಾಗಿ, ಅವರ ಪ್ರೀತಿ, ಕಾಳಜಿ ಸ್ಮರಿಸುವುದು ಎಲ್ಲರ ಕರ್ತವ್ಯ ಎಂದರು.

ಬಿಆರ್‌ಪಿ ಈರಪ್ಪ ಮಾತನಾಡಿ, ಮಾಜಿ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಉತ್ತಮ ಮನಸು ರೂಪಿಸುವಲ್ಲಿ ಪಠ್ಯಪುಸ್ತಕ ಮೀರಿದ ಮೌಲ್ಯ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಬಹು ದೊಡ್ಡದು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ಹಿರೇಮಲ್ಲನಹೊಳೆ ಎಸ್‌ಕೆಒಎಸ್‌ಟಿ ಮೆಮೊರಿಯಲ್ ಶಾಲೆ ಮುಖ್ಯಶಿಕ್ಷಕಿ ರೇಖಾ ಅವರಿಗೆ ಸಂಸ್ಥೆಯಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಪತ್ರಕರ್ತ ಕೆ.ಟಿ. ಓಬಳೇಶ್, ಮುಖ್ಯಶಿಕ್ಷಕಿಯರಾದ ವಿಶಾಲಾಕ್ಷಿ, ಸುನೀತಮ್ಮ, ಸಂಸ್ಥೆಯ ಎಲ್ಲ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net