

ಬೆಳಗಾವಿ : ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ತತ್ಸಮಾನ ವೃಂದದ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಕೌನ್ಸಲಿಂಗ್ ಮಂಗಳವಾರ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ಸುಸೂತ್ರವಾಗಿ ನೆರವೇರಿತು.
ಬೆಳಗ್ಗೆ 10.30ಕ್ಕೆ ನಿಗದಿಯಾಗಿದ್ದ ಕೌನ್ಸಲಿಂಗ್ 11.45ರಿಂದ ಆರಂಭವಾಗಿ, ಯಾವುದೇ ತೊಂದರೆ ಇಲ್ಲದೇ, ಸರಾಗವಾಗಿ ನೆರವೇರಿತು. ಪ್ರಾಥಮಿಕ ಶಾಲೆಯ 20 ಮುಖ್ಯ ಶಿಕ್ಷಕರು, 113 ಸಹಾಯಕ ಶಿಕ್ಷಕರು, 39 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಓರ್ವ ವಿಶೇಷ ಶಿಕ್ಷಕರಿಗೆ ಸ್ಥಳ ನಿಯುಕ್ತಿಗೊಳಿಸಲಾಯಿತು. ಪ್ರೌಢ ಶಾಲೆಯ 22 ಸಹಾಯಕ ಶಿಕ್ಷಕರು ಹಾಗೂ 30 ವಿಷಯ ಶಿಕ್ಷಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.