ಶಿಕ್ಷಕರ ಪತ್ತಿನ ಸಹಕಾರ ಸಂಘಕ್ಕೆ ರವೀಶ್ ಅಧ್ಯಕ್ಷ: ಉಪಾಧ್ಯಕ್ಷರಾಗಿ ಎಸ್.ಸಿ.ವಿಶ್ವಮಂಜುಸ್ವಾಮಿ ಆಯ್ಕೆ

Teachers Cooperative Society Election Mandya
Published on

ಮಂಡ್ಯ: ಜಿಲ್ಲಾ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ 2025-30ರ ಅವಧಿಗೆ ನೂತನ ಅಧ್ಯಕ್ಷರಾಗಿ ನಿಲುವಾಗಿಲು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಎಚ್.ಎಸ್.ರವೀಶ್ ಹಾಗೂ ಉಪಾಧ್ಯಕ್ಷರಾಗಿ ನಾಗಮಂಗಲದ ಸರ್ಕಾರಿ ಪದವಿ ಪೂರ್ವ ಕಾಲೇಜಿ(ಪ್ರೌಢಶಾಲೆ ವಿಭಾಗ)ನ ಸಹ ಶಿಕ್ಷಕ ಎಸ್.ಸಿ.ವಿಶ್ವಮಂಜುಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ರವೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ಸಿ.ವಿಶ್ವಮಂಜುಸ್ವಾಮಿ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸಹಕಾರ ಸಂಘಗಳ ನಿಬಂಧಕರ ಕಚೇರಿ ನಿರೀಕ್ಷಕ ಎನ್.ಎಲ್.ರವಿ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಎಚ್.ಎಸ್.ರವೀಶ್ ಮಾತನಾಡಿ, ಎಲ್ಲ ನಿರ್ದೇಶಕರ ಸಹಕಾರ ಪಡೆದು ಸಂಘದ ಅಭಿವೃದ್ಧಿ ಮಾಡುವುದರ ಜತೆಗೆ ಹೆಚ್ಚು ಸದಸ್ಯರನ್ನು ಸೇರ್ಪಡೆ ಮಾಡಲಾಗುವುದು. ಶಿಕ್ಷಕರು ಹೆಚ್ಚು ಠೇವಣಿ ಇಡಲು ಪ್ರೋತ್ಸಾಹಿಸುವುದು. ಸದಸ್ಯರು ಮತ್ತು ಮಕ್ಕಳಿಗೆ ಪುರಸ್ಕಾರ ಕಾರ್ಯಕ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಂಘವನ್ನು ಕ್ರಿಯಾಶೀಲಗೊಳಿಸುವುದಾಗಿ ಹೇಳಿದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಡಿ.ರಮೇಶ್, ಕಾರ್ಯದರ್ಶಿ ಬಿ.ಡಿ.ಶಂಕರೇಗೌಡ, ಉಪಾಧ್ಯಕ್ಷ ಆರ್.ಸಿ.ನಾಗೇಗೌಡ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ.ಆರ್.ಶಶಿಧರ ಈಚಗೆರೆ, ಸಂಘದ ಮಾಜಿ ಅಧ್ಯಕ್ಷ ಎಚ್.ಎಸ್.ಶಿವರಾಮು, ಮದ್ದೂರು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಜೆ.ಮಂಜುನಾಥ್, ಮಂಡ್ಯ ದಕ್ಷಿಣ ವಲಯ ಅಧ್ಯಕ್ಷ ಎಂ.ಇ.ಶಿವಣ್ಣ ಮಂಗಲ, ನಿರ್ದೇಶಕರಾದ ಶಿವಕುಮಾರಸ್ವಾಮಿ, ಎಸ್.ಸುರೇಶ್, ಎಂ.ಬಿ.ಭೈರಶೆಟ್ಟಿ, ಪ್ರಸಾದ್, ಪಿ.ಸುರೇಖಾ,ವಿಮಲ, ಕೆ.ಕಿರಣ್‌ಕುಮಾರ್, ಕೆ.ಡಿ.ನಂದೀಶ್, ಕೆ.ಎಸ್.ಬೋರೇಗೌಡ, ಜೆ.ಸಿ.ಯೋಗೇಶ್, ಮಂಚೇಗೌಡ, ವಿ.ಟಿ.ರಘುನಾಥ್, ಲಕ್ಷ್ಮಣ್ ಬಹದ್ದೂರ್, ಸೋಮಶೇಖರ್ ನೂತನ ವರಿಷ್ಠರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net