

ಮಂಗಳೂರು: ದ.ಕ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿ ಒಳಗೊಂಡ ಮಂಗಳೂರು ಶಿಕ್ಷಕರ ಸಹಕಾರಿ ಕ್ರೆಡಿಟ್ ಸಂಘದ 34ನೇ ಮಹಾಸಭೆ ಇತ್ತೀಚೆಗೆ ಅಧ್ಯಕ್ಷ ಸಿ.ಪ್ರಭಾಕರ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘ 4,013 ಸದಸ್ಯರನ್ನು ಹೊಂದಿದ್ದು, 5,42,00,500 ರೂ. ಪಾಲು ಬಂಡವಾಳ, 47,30,92,595 ರೂ. ಠೇವಣಿ ಹೊಂದಿದೆ. 61,48,98,037 ರೂ. ದುಡಿಯುವ ಬಂಡವಾಳದೊಂದಿಗೆ ಒಟ್ಟು 90,01,83,530 ರೂ. ವ್ಯವಹಾರ ನಡೆಸಿದೆ. ವರ್ಷಾಂತ್ಯಕ್ಕೆ ಒಟ್ಟು 43,21,21,950 ರೂ. ಹೊರಬಾಕಿ ಸಾಲ ಇದೆ ಎಂದು ಸಿ.ಪ್ರಭಾಕರ ಶೆಟ್ಟಿ ತಿಳಿಸಿದರು.
ರಾಜ್ಯಮಟ್ಟದ ಮತ್ತು ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಗೌರವಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪ್ರತಿಭಾ ಪುರಸ್ಕಾರದ ಪ್ರಾಯೋಜಕತ್ವ ವಹಿಸಿದ ಸಂಘದ ಸದಸ್ಯ ಮಿಲಾಗ್ರಿಸ್ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸ್ಟ್ಯಾನಿ ಫ್ರಾನ್ಸಿಸ್ ಬಾರೆಟ್ಟೊ ಅವರನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕರಾದ ರಾಮಶೇಷ ಶೆಟ್ಟಿ, ಉದಯಶಂಕರ ನಾಯ್ಕ ಟಿ., ಪಿ.ಡಿ.ಶೆಟ್ಟಿ, ಅಂಬರೀಶ್, ಸುರೇಶ್ ರಾವ್ ಬಿ., ಹಿಲ್ಡಾ ಕ್ಲೆಮೆನ್ಸಿಯಾ ಪಿಂಟೊ, ವಸಂತ ಕೆ., ಪುಟ್ಟಸ್ವಾಮಿ ಆರ್., ವಿಜಯ ಆಳ್ವ, ಮಾರ್ಕ್ ಜೆ.ಮೆಂಡೋನ್ಸಾ, ಚಂದ್ರಶೇಖರ್ ಸಿ.ಎಚ್, ತಿಪ್ರೋಜಿ ಎಂ.ವೈ, ರೀಟಾ ಡೇಸಾ, ವನಿತಾ, ಉಸ್ಮಾನ್ ಜಿ. ಹಾಗೂ ಸಿಇಒ ಶರ್ಮಿಳಾ ಕೆ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ಕೆ.ಎಂ.ಕೆ. ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.