

ಹುಬ್ಬಳ್ಳಿ: ಮಾಧ್ಯಮಿಕ ಶಾಲಾ ನೌಕರರ ಸಹಕಾರಿ ಪತ್ತಿನ ಸಂಘದ ನೂತನ ಅಧ್ಯಕ್ಷರಾಗಿ ಜಗದ್ಗುರು ಗಂಗಾಧರ ಪ್ರೌಢಶಾಲೆಯ ಶಿಕ್ಷಕ ಎಸ್.ವಿ. ಪಟ್ಟಣಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಶಿವಪ್ಪಣ್ಣ ಜಿಗಳೂರು ಪ್ರೌಢಶಾಲೆಯ ಶಿಕ್ಷಕ ಶಾಂತಯ್ಯ ತಂಬೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆ ನೋಡಲ್ ಅಧಿಕಾರಿ, ಸಹಕಾರಿ ಪತ್ತಿನ ಸಂಘದ ನೋಂದಣಿ ನಿಬಂಧನೆಗಳು ಇಲಾಖೆಯ ಅಧಿಕಾರಿ ಗಿರೀಜಾ ಬಣಕಾರ ಹಾಗೂ ಪತ್ತಿನ ಸಂಘದ ಕಾರ್ಯದರ್ಶಿ ರವಿಕುಮಾರ ಸಿನ್ನೂರ ಉಪಸ್ಥಿತರಿದ್ದರು.
ಅವಿರೋಧ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸನ್ಮಾನಿಸಿದರು.