ಶಿಕ್ಷಕರು ವಿದ್ಯಾರ್ಥಿಗಳ ಬದುಕಿನ ದಾರಿದೀಪ

MDG1 (2)
Published on

ಮೂಡಿಗೆರೆ: ಗುರುಗಳು ಶಾಲೆಯಲ್ಲಿ ಮಾಡುವ ಪಾಠಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಮುಂದಿನಬದುಕಿಗೆ ದಾರಿದೀಪ ತೋರಿಸುವ ಮಾರ್ಗದರ್ಶಕರಾಗಿರುತ್ತಾರೆ ಎಂದು ಗ್ರಾಮದ ಹಿರಿಯ ಮುಖಂಡಟಿ.ಎ.ಖಾದರ್ ಹಾಜಿ ತಿಳಿಸಿದರು.

ಕೊಟ್ಟಿಗೆಹಾರ ಮಸೀದಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕರುಮತ್ತು ಶಿಕ್ಷಣ ಸಂಸ್ಥೆಯೊಂದಿಗೆ ವಿದ್ಯಾರ್ಥಿಗಳ ಒಡನಾಟ ಜನ್ಮ ಕಳೆದರೂ ಮುಂದುವರಿಯುತ್ತದೆ.ಶಿಕ್ಷಕರಿಂದ ಕಲಿಯುವ ಪಾಠ ಮಕ್ಕಳನ್ನು ಶಿಸ್ತು, ಸಂಸ್ಕಾರ ಹಾಗೂ ಮೌಲ್ಯಬದ್ಧತೆಯ ದಿಕ್ಕಿನಲ್ಲಿಕರೆದೊಯ್ಯುತ್ತದೆ. ಗುರುಗಳು ಕಲಿಸಿಕೊಡುವ ಪಾಠ ಕೇವಲ ಪಠ್ಯಕ್ರಮ ಮಾತ್ರವಲ್ಲದೇ ಬದುಕಿನಸುಂದರ ಪಾಠಗಳಾಗಬೇಕು. ಶಿಕ್ಷಕನಿಂದ ಪಾಠ ಕಲಿತವರು ತಮ್ಮ ಜೀವನ ಪೂರ್ತಿ ಆಶಿಕ್ಷಕನನ್ನುಸ್ಮರಿಸುತ್ತಾರೆ. ಅದರ ಜತೆಗೆ ಜೀವನದ ಮೌಲ್ಯವನ್ನು ಪಾಲನೆ ಮಾಡುತ್ತಾರೆ. ವಿದ್ಯಾರ್ಥಿ ಜೀವನದಲ್ಲಿಆತ್ಯುತ್ತಮವಾಗಿ ಕಲಿತು ಸಮಾಜದಲ್ಲಿ ಉತ್ತಮ ವ್ಯಕ್ತಿಯಾದರೆ ಪಾಠ ಕಲಿಸಿದ ಶಿಕ್ಷಕನಿಗೆ ಗೌರವದೊರೆತಂತಾಗುತ್ತದೆ ಎಂದು ತಿಳಿಸಿದರು.

ಮಸೀದಿ ಧರ್ಮಗುರು ಇಮ್ದಾನಿ ಕನ್ಯಾನ ಉಸ್ತಾದ್ ಮಾತನಾಡಿ, ಗುರು-ಶಿಷ್ಯ ಪರಂಪರೆ ನಮ್ಮಸಂಸ್ಕೃತಿಯ ನೈತಿಕ ಆಧಾರವಾಗಿದೆ. ಶಿಕ್ಷಕರ ಪಾಠ ಕೇಳಿ ಬೆಳೆದ ವಿದ್ಯಾರ್ಥಿಗಳು ಸದ್ಭಾವನೆ, ಗೌರವಹಾಗೂ ಗುರುಮಹಿಮೆತಿಳಿಸುವಜವಾಬ್ದಾರಿಹೊಂದಿಕೊಳ್ಳುವಂತಾಗಬೇಕು. ಮಾದರಿವಿದ್ಯಾರ್ಥಿಗಳಿಂದ ಶಿಕ್ಷಕರ ಘನತೆ ಹೆಚ್ಚುತ್ತದೆ ಎಂದರು.

ಮಸೀದಿ ಕಾರ್ಯದರ್ಶಿ ಹಸೈನಾರ್ ಹಾಜಿ ಮಾತನಾಡಿ, ಗುರುಗಳು ಮಕ್ಕಳಲ್ಲಿ ಬೆಳಕು

ಮೂಡಿಸುವಂತಹ ಶಿಲ್ಪಿಗಳಾಗಬೇಕು. ಆರಂಭಿಕವಾಗಿ ಕಲ್ಲಾಗಿರುವ ಮಕ್ಕಳನ್ನು ಶಿಲೆಯನ್ನಾಗಿ ಕೆತ್ತುವಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ಶಿಲೆಯಾದ ನಂತರ ಸಾರ್ವಜನಿಕರ ಸೇವೆಗೆ ಮುಂದಾಗಬೇಕು.ಇದಕ್ಕೆಲ್ಲ ಕಾರಣ ಶಿಕ್ಷಕರು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಮದರಸಾ ವಿದ್ಯಾರ್ಥಿಗಳು ಪವಿತ್ರ ಕುರಾನ್, ಹದೀಸ್ ಓದುವ ಮೂಲಕ ಶಿಕ್ಷಕರಿಗೆ ಗೌರವ ಸಲ್ಲಿಸಿದರು.ನಂತರ ಮಕ್ಕಳಹಾಡು, ಕವನ ವಾಚನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕೊಟ್ಟಿಗೆಹಾರಮಸೀದಿ ಆಡಳಿತ ಸಮಿತಿ ಸದಸ್ಯರಾದ ಬಾವಕ, ಸಿದ್ದಿಕ್, ಸಾದಿಕ್, ಅಬ್ಬಾಸ್, ಸನಾವ್, ಅಶ್ರಫ್,

ಸಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net