ಶಿಕ್ಷಕರು ಉತ್ತಮ ಸಮಾಜದ ನಿರ್ಮಾತೃಗಳು

PH 5
Published on

ದೇವಲಗಾಣಗಾಪುರ: ಕಲ್ಲು ಕೆತ್ತಿ ಮೂರ್ತಿಯನ್ನು ರೂಪಿಸುವ ಶಿಲ್ಪಿಯಂತೆ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಡಾ.ಎಂ.ಜೆ.ಪಟೇಲ್ ಹೇಳಿದರು.

ಬಿದನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸೇವಾ ನಿವೃತ್ತ ವಿಜಯಕುಮಾರ ಸಾಲಿಮಠ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕ ಸಾಲಿಮಠ ಅವರು 31 ವರ್ಷಗಳ ಸೇವಾ ಅವಧಿಯಲ್ಲಿ ಕಳಂಕ ರಹಿತ ಸೇವೆ ಸಲ್ಲಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ವಿe್ಞÁನ ಪರಿಷತ್ ಅಧ್ಯಕ್ಷ ಗಿರೀಶ್ ಕಡ್ಲೆವಾಡ್, ಮುಖಂಡರಾದ ಅರುಣಕುಮಾರ ಹರಳಯ್ಯ, ಅಬ್ದುಲï, ಶರಣು ಮಾತನಾಡಿದರು. ಅಫಜಲಪುರದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಾನ್ನಿಧ್ಯ, ಮುಖ್ಯಗುರು ಸುಧಾ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು.

ಶ್ರೀ ವಿರೂಪಾಕ್ಷಿ ಶರಣರು, ಗ್ರಾಪಂ ಅಧ್ಯP್ಷÀ ಶಿವಕುಮಾರ ಮೇಳಕುಂದಿ, ಸದಸ್ಯ ಅಂಬಾರಾಯ ವರವಿ, ಪ್ರಮುಖರಾದ ಚಂದಪ್ಪ ಕರಜಗಿ, ಮರೆಪ್ಪ ಚಿಕ್ಕಕೌಲಗಿ, ಲಕ್ಷಿö್ಮÃಪುತ್ರ ಜಂಬಾಳಿ, ಶಿವಾನಂದ ಜೋಗುರ, ಮಹಾಂತ ನಡಗಟ್ಟಿ, ಅಂಬರೀಷ ತಳವಾರ, ಬುದ್ಧಿವಂತ ಚಿಕ್ಕ ಕೌಲಗಿ, ಮಾರುತಿ ಮೂರನೆತ್ತಿ, ಎಚ್.ಎಸ್.ಪಾಟೀಲ್, ರಾಜಶೇಖರ ತಲಾರಿ, ರಾಘವಾಚಾರ್ಯ ಜೋಶಿ, ಶರಣಪ್ಪ ಜಂಬಾಳಿ, ಮಲ್ಲಿಕಾರ್ಜುನ ಅಚಲೇರಿ, ರಾಜೇಂದ್ರ ಚಿಕ್ಕ ಕೌಲಗಿ, ಮಲ್ಲಿಕಾರ್ಜುನ ಪಾಟೀಲï, ಮೀರಾ ಪಟೇಲï, ಶಿವಶರಣಪ್ಪ ಸಾಲುಟಿಗಿ, ಅಶೋಕ ಸಾಲಿಮಠ, ಗುರುಬಸಯ್ಯ ಸಾಲಿಮಠ, ಬಸವರಾಜ ಸಾಲಿಮಠ, ಸತೀಶ್ ಇತರರಿದ್ದರು. ರೇವಣಸಿದ್ದ ಕಲಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ವಿಜಯಕುಮಾರ ಸಾಲಿಮಠ ದಂಪತಿಯನ್ನು ಅದ್ದೂರಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net