

ಹುಬ್ಬಳ್ಳಿ: ಚಿನ್ಮಯ ವಿದ್ಯಾಲಯ ವತಿಯಿಂದ ನಗರದ ಸ್ವಪ್ನಾ ಪುಸ್ತಕ ಮಳಿಗೆ ಮೇಲೆ (ಲಕ್ಷ್ಮೀ ಫ್ರೈಡ್) ಶಿಕ್ಷಕರ ದಿನವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.
ಶ್ರೀ ಕೃತಾತ್ಮಾನಂದ ಸ್ವಾಮೀಜಿ ಮಾತನಾಡಿ, ಜಗತ್ತಿನ ಅತ್ಯಂತ ಉತ್ಕೃಷ್ಟ ವೃತ್ತಿ ಶಿಕ್ಷಕ ವೃತ್ತಿ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರೇ ಜವಾಬ್ದಾರರು. ಹಾಗಾಗಿ ಶಿಕ್ಷಕರು ಸದಾಕಾಲಾ ಕಲಿಯುತ್ತ ಕಲಿಸಬೇಕು ಎಂದರು.
ಚಿನ್ಮಯ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಸಿ.ಎ. ಗಿರೀಶ ಉಪಾಧ್ಯಾ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿ ನಟ ಮಯೂರ ಮತ್ತು ವೈಭವ, ‘ಮಾತೊಂದು ಹೇಳುವೆ’ ಚಿತ್ರ ತಂಡದವರನ್ನು ಸನ್ಮಾನಿಸಲಾಯಿತು.
ಚಿನ್ಮಯ ಸೇವಾ ಸಮಿತಿ ಧರ್ಮದರ್ಶಿಗಳಾದ ಪಾಂಡುರಂಗ ನಾಯ್ಡು, ಆಡಳಿತಾಧಿಕಾರಿ ವಿಶ್ವನಾಥ ರಾನಡೆ, ಮುಖ್ಯೋಪಾಧ್ಯಾಯಿನಿ ನೀತಾ ಹೆಗಡೆ, ಭುವನೇಶ್ವರಿ ನವಡಾ, ಅಂಜಲಿ ಗುಡಿ, ಪ್ರಾಚಾರ್ಯ ವಿನಾಯಕ ಬಿ.ಕೆ., ರಶ್ಮಿ ಪಾಟೀಲ, ಅಮೃತ ಬೆಳವಡಿ, ಪುಷ್ಪಾ ಇತರರು ಇದ್ದರು.