

ಹುಬ್ಬಳ್ಳಿ: ಪಾಲಿಕೆ ಮಾಜಿ ಸದಸ್ಯ ದಶರಥ ವಾಲಿ ಅವರು ತಮ್ಮ ಜನ್ಮ ದಿನ ನಿಮಿತ್ತ ಹಳೇ ಹುಬ್ಬಳ್ಳಿಯ ಸದ್ಗುರು ಶ್ರೀ ಸಿದ್ಧಾರೂಢ ಸ್ವಾಮಿ ಪ್ರೌಢ ಶಾಲೆಗೆ ನೂತನ ಪ್ರಾಜೆಕ್ಟರ್ ಗುರುವಾರ ದೇಣಿಗೆಯಾಗಿ ನೀಡಿದರು.
ನಂತರ ಮಾತನಾಡಿದ ಅವರು, ಶಿಕ್ಷಕರು ವಿನೂತನ ತಂತ್ರಜ್ಞಾನ ಅಳವಡಿಸಿಕೊಂಡು ಬೋಧನೆ ಮಾಡಬೇಕು. ಮಕ್ಕಳ ಕಲಿಕೆಗೆ ಇದು ಪರಿಣಾಮಕಾರಿ ಪ್ರಭಾವ ಬೀರಲಿದೆ ಎಂದರು.
ಉದ್ಯಮಿ ಸಂತೋಷ ಶೆಟ್ಟಿ ಮಾತನಾಡಿ, ಮೂರು ಕೊಠಡಿಗಳಿಗೆ ಬೇಕಾಗುವ ಟೈಲ್ಸ್‌ಗೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಶಿಕ್ಷಣಾಧಿಕಾರಿ ಜಯಶ್ರೀ ವರೂರ ಮಾತನಾಡಿದರು.
ಧರ್ಮದರ್ಶಿ ನಂದಕುಮಾರ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಡಳಿತ ಮಂಡಳಿ ಉಪಾಧ್ಯಕ್ಷ ಮೋಹನ ಗೌಡರ, ಸದಸ್ಯರಾದ ಎಲ್.ವಿ. ದೇವಗಿರಿ, ಅಬೀದ ಜೋಡಗೇರಿ, ಶಿಕ್ಷಕರಾದ ಎಂ.ಬಿ. ಪಾಟೀಲ, ಪ್ರಭು ತಳವಾರ, ಆರ್.ಎಚ್. ತಳವಾರ, ಶ್ರೀನಿವಾಸ ವಾಲಿ ಇತರರು ಇದ್ದರು.