

ಮಹಾಲಿಂಗಪುರ: ಗುರುವಿನ ಸ್ಥಾನ ನೀಡಿ ಗೌರವ ಹೆಚ್ಚಿಸಿದ ಶಿಷ್ಯರ ಗುರುಭಕ್ತಿಗೆ ಶರಣಾಗುವೆವು ಎಂದು ಸ್ಥಳೀಯ ಎಸ್‌ಸಿಪಿ ಪ್ರೌಢಶಾಲೆ ಉಪಪ್ರಾಂಶುಪಾಲ ಬಿ.ಎನ್. ಅರಕೇರಿ ಹೇಳಿದರು.
ಪಟ್ಟಣದ ಎಸ್‌ಸಿಪಿ ಪ್ರೌಢಶಾಲೆಯಲ್ಲಿ 2006-07ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪಾಸಾದ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಸ್ನೇಹಿತರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿತ ಶಾಲೆ ಮತ್ತು ಕಲಿಸಿದ ಗುರುಗಳನ್ನು 18 ವರ್ಷಗಳ ನಂತರ ನೆನೆದು ಎಲ್ಲರನ್ನೂ ಸನ್ಮಾನಿಸುವ ಗುರುಭಕ್ತಿ ಶ್ಲಾಘನೀಯ ಎಂದರು.
ಇದಕ್ಕೂ ಮುನ್ನ ವಿದ್ಯಾರ್ಥಿಗಳು ನೆಲಕ್ಕೆ ಹೂ ಹಾಸಿ ಇಕ್ಕೆಲಗಳಲ್ಲಿ ನಿಂತು ಎಲ್ಲ ಗುರುಗಳ ತಲೆ ಮೇಲೆ ಹೂ ಮಳೆಗರೆದು ಶಿಕ್ಷಕರನ್ನು ವೇದಿಕೆಗೆ ಬರಮಾಡಿಕೊಂಡರು. ಹೂಗುಚ್ಛ ನೀಡಿ ಗೌರವಿಸಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಶಿಕ್ಷಕರಾದ ಎಸ್.ಜಿ. ಜೀವಣಿ, ಸಿ.ಎಸ್. ಕೊಣ್ಣೂರ ಹಾಗೂ ಸಹಪಾಠಿಗಳಾದ ಶಿವಲೀಲಾ ಶಿರೋಳ, ಮಹಾಲಿಂಗ ಮಠಪತಿ ಅವರಿಗೆ ಮೌನ ಆಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸವಿತಾ ಕಂಬಾರ, ಮಾಲಾಶ್ರೀ ಉಪ್ಪಾರ ಪ್ರಾರ್ಥಿಸಿದರು. ಪೂಜಾ ಶಿರೋಳ, ಅಶ್ವಿನಿ ಹುಡೇದಮನಿ ಸ್ವ್ವಾಗತ ಗೀತೆ ಹಾಡಿದರು. ಅಕ್ಷತಾ ಮುಧೋಳ ಪುಷ್ಪಾರ್ಪಣೆ ಮಾಡಿದರು. ಕೆಎಲ್‌ಇ ಎಸ್‌ಸಿಪಿ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಅಂಗಡಿ ಕಾರ್ಯಕ್ರಮ ಉದ್ಘಾಟಿಸಿದರು. ಪೂಜಾ ಶಿರೋಳ, ಚೇತನ ಡೋಣಿ, ಪ್ರವೀಣ ಹೊಸಕೋಟಿ ಅನಿಸಿಕೆ ವ್ಯಕ್ತಪಡಿಸಿದರು.
ಗುರುಗಳಾದ ಎಸ್.ಬಿ. ಹುಲಕುಂದ, ಎಸ್.ಬಿ. ಕೋರಿಶೆಟ್ಟಿ, ಎಂ.ಐ. ಡಾಂಗೆ, ಬಿ.ಡಿ. ಗೋಕಾಕ, ಬಿ.ಎನ್. ಅರಕೇರಿ, ಆರ್.ಎಸ್. ಯರಗಾಣಿ, ಎಸ್.ಎಸ್. ಅನಿಗೋಳ, ಸಿ.ಎ. ಡತಾರೆ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು.
ಗುರು-ಶಿಷ್ಯರು ಗತಕಾಲದ ನೆನಪು ಮತ್ತು ಅನುಭವಗಳನ್ನು ಮೆಲುಕು ಹಾಕಿದರು. ವಿದ್ಯಾರ್ಥಿಗಳು ಪ್ರತಿಯೊಬ್ಬ ಶಿಕ್ಷಕರಿಗೂ ಒಂದೊಂದು ಗಿಡ ನೀಡಿ ಅದು ಹಚ್ಚಹಸಿರಾಗಿರುವಂತೆ ಮತ್ತು ತಮ್ಮ ನೆನಪು ಕೂಡ ಹಸಿರಾಗಿರುವಂತೆ ಮನವಿ ಮಾಡಿದರು. ಎಲ್ಲ ಗುರುಶಿಷ್ಯರೊಂದಾಗಿ ಗುಂಪು ೋಟೋ ಮತ್ತು ಸೆಲ್ಫಿ ತೆಗೆದುಕೊಂಡರು.
ಪ್ರವೀಣ ಸೋನಾರ, ವನಜಾ ಶಿವಣಗಿ, ಗೋಪಿನಾಥ ರೇಣಕೆ, ಅಕ್ಷತಾ ಮುಧೋಳ, ಶಿವು ಅಂಬಿ, ಪೂಜಾ ಶಿರೋಳ, ಮಾಲಾಶ್ರೀ ಉಪ್ಪಾರ, ಪ್ರವೀಣ ಹೊಸಕೋಟಿ ಕಾರ್ಯಕ್ರಮ ಸಂಘಟಿಸಿದ್ದರು.