ಆದೇಶ ಹಿಂಪಡೆಯಲು ಒತ್ತಾಯಿಸಿ ಶಿಕ್ಷಕರ ಮನವಿ

ctd shikshakra manavi---------
Published on

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಕಡಿಮೆ ಫಲಿತಾಂಶ ಪಡೆದಿರುವ ಅನುದಾನಿತ ಪ್ರೌಢಶಾಲೆಗಳ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವ ಆದೇಶ ಹಿಂ ಪ ಡೆಯುವಂತೆ ಆಗ್ರಹಿಸಿ ರಾಜ್ಯಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾಲೂಕು ಶಾಖೆಯಿಂದ ಮಂಗಳವಾರ ರಾಜ್ಯಸರ್ಕಾರವನ್ನು ಒತ್ತಾಯಿಸಲಾ ಯಿತು.

ವಿಷಯವಾರು ಫಲಿತಾಂಶ ಪರಿಗಣಿಸಿ,ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಬಂದಿರುವ ಅನುದಾನಕ್ಕೆ ಒಳಪಟ್ಟಿರುವ ಪ್ರೌಢಶಾಲೆಗಳ ಶಿಕ್ಷಕರನ್ನು

ಗುರುತಿಸಿ ವಾರ್ಷಿಕ ವೇತನ ಬಡ್ತಿ ತಡೆ ಹಿಡಿಯುವುದು. ನಿರಂತರ ಮೂರು ವರ್ಷಗಳಲ್ಲಿ ಶೇ.60 ಕ್ಕಿಂತ ಕಡಿಮೆ ಫಲಿತಾಂಶ ಬಂದಿದ್ದರೆ ಅಂತ ಹ ಶಿಕ್ಷಕರ ವೇತಾನುದಾನ ತಡೆಹಿಡಿಯುವುದು ಇತ್ಯಾದಿ ಕ್ರಮಕ್ಕೆ ಧಾರವಾಡ ಮತ್ತು ಕಲಬುರಗಿ ಆಯುಕ್ತಾಲಯ ವ್ಯಾಪ್ತಿಗೊಳಪಡುವ ಡಿಡಿಪಿ ಐಗಳಿಗೆ ಸೂಚಿಸಲಾಗಿದೆ.

ಕಳಪೆ ಫಲಿತಾಂಶಕ್ಕೆ ಶಿಕ್ಷಕರು ಮಾತ್ರ ಕಾರಣವಲ್ಲ,ವಿದ್ಯಾರ್ಥಿಗಳಿಗೆ ದೊರೆತಿರುವ ಪ್ರಾಥಮಿಕ ಶಿಕ್ಷಣ,ಪಾಲಕರು,ಆಡಳಿತ ಮಂಡಳಿ ಅಸಹಕಾರ ಸಹಿತ ನಾನಾ ಕಾರಣಗಳಿರುತ್ತವೆ. ಆದ್ದರಿಂದ ಕ್ರಮಕ್ಕೆ ಹೊರಡಿಸಿರುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿ ಬಿಇಒ ಎಸ್.ನಾಗಭೂಷ ಣ್ ಅವರಿಗೆ ಮನವಿ ಸಲ್ಲಿಸಿದರು. ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ,ತಾಲೂಕು ಅಧ್ಯಕ್ಷ ಬಸವರಾಜಪ್ಪ, ಶ್ರೀನಿವಾಸ್, ಎಸ್.ರಾಜಪ್ಪ, ಡಿ.ಮಂಜುನಾಥ್,ಕೀರ್ತಿಕುಮಾರ್, ಡಾ.ಮಹೇಶ್,ದ್ವಾರಕನಾಥ್,ರಾಮಣ್ಣ,ನಿಜಲಿಂಗಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net