ಶಿಕ್ಷಕರು ಪಾಲಕರು ಎರಡು ಕಣ್ಣುಗಳಿದ್ದಂತೆ

12 Dwd 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಕರು ಮತ್ತು ಪಾಲಕರು ಎರಡು ಕಣ್ಣುಗಳಿದ್ದಂತೆ. ಅವರು ತೋರಿಸಿದ ಮಾರ್ಗದಲ್ಲಿ ನಡೆದರೆ ಗೆಲುವು ಖಚಿತ ಎಂದು ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಹೇಳಿದರು.

ನಗರದ ಶ್ರೀಮತಿ ವಿದ್ಯಾ ಪಿ. ಹಂಚಿನಮನಿ ಅಂತಾರಾಷ್ಟ್ರೀಯ ಶಾಲೆಯ 2025- 26ನೇ ಸಾಲಿನ ಶಾಲಾ ಸಂಸತ್ ಪದಾಽಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಸಂಸತ್ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ನಾಯಕರಾಗುವುದಿಲ್ಲ. ನಿಜವಾದ ನಾಯಕರು ಎಲ್ಲರ ಜತೆ ಬೆರೆತು ದನಿಯಾಗಬೇಕು. ನಾಯಕತ್ವ ಗುಣಗಳನ್ನು ಈಗಿನಿಂದಲೇ ಮೈಗೂಡಿಸಿಕೊಳ್ಳಬೇಕು ಎಂದರು.

ಸ0ಸ್ಥೆಯ ಚೇರ್ಮನ್ ಪ್ರೊ. ಪ್ರಲ್ಹಾದ ಹಂಚಿನಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ವಿದ್ವಾನ್ ಡಾ. ನವೀನ ಭಟ್ ಚುನಾಯಿತ ಸದಸ್ಯರಿಗೆ ಪ್ರತಿಜ್ಞಾವಿಽ ಬೋಽಸಿದರು. ಸಹ ಕಾರ್ಯದರ್ಶಿ ವರ್ಷಾ ಹಂಚಿನಮನಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net