ಶಿಕ್ಷಕರು ಸದಾ ಚಟುವಟಿಕೆಯಲ್ಲಿರಲಿ

28Anand4
ಬೆಳಗಾವಿ ನಗರದ ಶೇಖ್ ಬಿ.ಎಡ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಜ್ಯೋತಿ ಕವಳೇಕರ , ಡಾ.ಸಬೀನಾ, ಡಾ.ಇಂದಿರಾ ಸುತಾರ್ ಇತರರಿದ್ದರು.
Published on

ಬೆಳಗಾವಿ: ಶಿಕ್ಷಕ ವೃತ್ತಿಗೆ ತನ್ನದೇಯಾದ ಗೌರವವಿದೆ. ವೃತ್ತಿ ಬದುಕಿನಲ್ಲಿ ಮೌಲ್ಯಯುತ ಬೋಧನೆ ಮಾಡುತ್ತಾ, ನಿಂತ ನೀರಾಗದೆ ನಿರಂತರ ಚಟುವಟಿಕೆಯಲ್ಲಿ ತೋಡಗಬೇಕು ಎಂದು ಪ್ರಾಚಾರ್ಯೆ ಡಾ.ಜ್ಯೋತಿ ಕವಳೇಕರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ನಗರದ ಶೇಖ್ ಬಿ.ಎಡ್ ಕಾಲೇಜ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾರ್ಷಿಕ ದಿನ ಮತ್ತು ದೀಪದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು. ಬಲಿಷ್ಠ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹಳಷ್ಟಿದ್ದು, ಬಿ.ಎಡ್ ವೃತ್ತಿಪರ ತರಬೇತಿ ಪಡೆದ ವಿದ್ಯಾರ್ಥಿಗಳು ನಿರಂತರ ಓದಿನಲ್ಲಿ ತೊಡಗಿಸಿಕೊಳ್ಳಬೇಕೆಂದರು. ಶೇಖ್ ಗ್ರೂಪ್ ಆ್ ಇನ್‌ಸ್ಟಿಟ್ಯೂಷನ್ಸ್ ಅಧ್ಯಕ್ಷೆ ಡಾ.ಸಬೀನಾ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಗುರಿ ಸಾಧನೆಗಾಗಿ ಪರಿಶ್ರಮದಿಂದ ಅಧ್ಯಯನ ಕೈಗೊಂಡು, ತಮ್ಮ ಜೀವನದ ಗುರಿ ಸಾಧಿಸಬೇಕು. ಸಾಧಕರ ಜೀವನವನ್ನು ತಿಳಿದುಕೊಂಡು, ಅವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದು ಹೇಳಿದರು. ಇದೇ ವೇಳೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಪ್ರಾಂಶುಪಾಲ್ ಡಾ.ಇಂದಿರಾ ಸುತಾರ್, ಡಾ.ನಿರ್ಮಲಾ ತೇಲಿ, ಪ್ರೊ.ಕೋಮಲ್ ಸಾಂಬ್ರೇಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net